ಬಿಜೆಪಿಯಲ್ಲಿ ವಿಜಯೇಂದ್ರ- ಯತ್ನಾಳ್ ಬಣ ಬಡಿದಾಟ ಇನ್ನೇನು ಮುಗಿತು ಎನ್ನುವಷ್ಟರಲ್ಲೇ ಮತ್ತೆ ಶುರುವಾದಂತೆ ಭಾಸವಾಗುತ್ತಿದೆ. ಮತ್ತೆ ವಿಜಯೇಂದ್ರ-ಯತ್ನಾಳ್ ಬಣ ಬಡಿದಾಟ ಶುರುವಾಗಿದ್ದು, ಶಮನಕ್ಕಾಗಿ ಹೈಕಮಾಂಡ್ ಎಂಟ್ರಿ ಕೊಡುತ್ತಿದೆ.
ಈ ನಿಟ್ಟಿನಲ್ಲಿ ಬಿಜೆಪಿ ಬಣ ಬಡಿದಾಟಕ್ಕೆ ಬ್ರೇಕ್ ಹಾಕಲು ಮಹೂರ್ತ ಫಿಕ್ಸ್ ಆಗಿದೆ. ಡಿ. 29ರಂದು ವಿಜಯೇಂದ್ರ-ಯತ್ನಾಳ್ ಬಣಕ್ಕೆ ಶಾಕ್ ನೀಡಲು ಹೈಕಮಾಂಡ್ ಮುಂದಾಗಿದೆ. ಇತ್ತೀಚೆಗಷ್ಟೇ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಆಗಮಿಸಿದ್ದರು. ಬಣಗಳ ತಿಕ್ಕಾಟದ ಬಗ್ಗೆ ಅವರು ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ.
ಡಿ. 29ರಂದು ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ಹೈವೋಲ್ಟೇಜ್ ಸಭೆ ನಡೆಯಲಿದೆ. ಅಂದು ಜೆ.ಪಿ. ನಡ್ಡಾ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಕಳೆದ ಒಂದು ವರ್ಷದಲ್ಲಿ ನಡೆದ ಘಟನೆಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಪಕ್ಷವನ್ನು ಸರಿದಾರಿಗೆ ತರಲು ಯತ್ನಾಳ್ ಹಾಗೂ ವಿಜಯೇಂದ್ರ ಗೆ ಸೂಚನೆ ನೀಡುವ ಸಾಧ್ಯತೆ ಕೂಡ ಇದೆ.
ಎರಡು ಬಣಗಳು ಇತ್ತೀಚೆಗೆ ಪ್ರತ್ಯೇಕ ಸಮಾವೇಶ ಮಾಡಲು ಸಿದ್ಧತೆ ಮಾಡಿಕೊಂಡಿದ್ದವು. ಈ ವಿಷಯ ಕೂಡ ಹೈಕಮಾಂಡ್ ಅಂಗಳಕ್ಕೆ ಬಂದು ಮುಟ್ಟಿದೆ. ಹೀಗಾಗಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಯತ್ನಾಳ್ ಜೊತೆ ಜೆಪಿ ನಡ್ಡಾ ಪ್ರತ್ಯೇಕವಾಗಿ ಚರ್ಚಿಸುವ ಸಾಧ್ಯತೆ ಇದೆ. ಪಕ್ಷದ ಕುರಿತ ವಾತಾವರಣ, ಶಿಸ್ತು, ಪಕ್ಷದ ಬಗ್ಗೆ ಶಿಸ್ತು ಸೇರಿದಂತೆ ಸುದೀರ್ಘ ಚರ್ಚೆ ನಡೆಸುವ ಸಾಧ್ಯತೆ ಇದೆ. ಅಲ್ಲದೇ, ಈ ಸ್ಥಿತಿಯಲ್ಲಿ ಪಕ್ಷಕ್ಕೆ ಹೊಸ ಸಾರಥಿ ಘೋಷಿಸಬಹುದು ಎಂಬ ಮಾತುಗಳು ಕೂಡ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.