ಅಮೀರ್ ಖಾನ್ ಅಭಿನಯದ ಹೊಸ ಚಿತ್ರ ಬಿಡುಗಡೆಗೆ ಕಡೆಗೂ ಮುಹೂರ್ತ ಫಿಕ್ಸ್ ಆಗಿದೆ.
ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಂತಲೇ ಕರೆಯಿಸಿಕೊಳ್ಳುವ ಅಮೀರ್ ಅಭಿನಯದ ಸಿತಾರೆ ಜಮೀನ್ ಪರ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಜೂನ್ 20ರಂದು ಚಿತ್ರ ಜಗತ್ತಿನಾದ್ಯಂತ ರಿಲೀಸ್ ಆಗಲಿದೆ. ಈ ಬಗ್ಗೆ ಚಿತ್ರದ ರಿಲೀಸ್ ಪೋಸ್ಟರ್ ಬಿಡುಗಡೆ ಮಾಡಿರುವ ಅಮೀರ್, ಹಾಸ್ಯ ಮಿಶ್ರಿತ ಭಾವನಾತ್ಮಕ ಸಿನಿಮಾ ನಿಮ್ಮ ಮುಂದೆ ಅಂತಾ ಬರೆದುಕೊಂಡಿದ್ದಾರೆ.
ಆರ್ ಎಸ್ ಪ್ರಸನ್ನ ನಿರ್ದೇಶನದ ಚಿತ್ರಕ್ಕೆ ದಿವ್ಯ ನಿಧಿ ಶರ್ಮಾ ಚಿತ್ರಕತೆ ಬರೆದಿದ್ದಾರೆ. ಸಿತಾರೆ ಜಮೀನ್ ಪರ್ ಸಿನಿಮಾದಲ್ಲಿ ಖುದ್ದು ಅಮೀರ್ ಖಾನ್ ನಟಿಸಿ, ಬಂಡವಾಳ ಕೂಡಾ ಹೂಡಿದ್ದಾರೆ. ಚಿತ್ರಕ್ಕೆ ಶಂಕರ್, ಎಹಸಾನ್, ಲಾಯ್ ಸಂಗೀತವಿದೆ. ಈ ಹಿಂದೆ ತಾರೆ ಜಮೀನ್ ಪರ ಅನ್ನೋ ಚಿತ್ರದ ಮುಂದುವರಿದ ಭಾಗ ಎನ್ನುವಂತೆ ಇದೀಗ ಸಿತಾರೆ ಜಮೀನ್ ಪರ ರಿಲೀಸ್ ಆಗುತ್ತಿದೆ. ದೀರ್ಘ ಕಾಲದಿಂದ ಬೆಳ್ಳಿತೆರೆ ಮೇಲೆ ಮಿಂಚದೆ ಮರೆಯಾಗಿದ್ದ ಅಮೀರ್ ಈ ಸಿನಿಮಾ ಮೂಲಕ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.



















