ಉತ್ತರ ಪ್ರದೇಶ : ಉತ್ತರ ಪ್ರದೇಶದಲ್ಲಿ ಕಾಜಲ್ ಎಂಬ ತನ್ನ ಮೂರು ಮಕ್ಕಳ ತಾಯಿ ಪ್ರಿಯಕರನಿಗಾಗಿ ಕೈಹಿಡಿದ ಗಂಡನನ್ನೇ ಕೊಂದು ಶವವನ್ನ ಕಾಲುವೆಗೆ ಎಸೆದಿರುವುದು ಬೆಳಕಿಗೆ ಬಂದಿದೆ. ರೋಚಕ ಪ್ರಕರಣವನ್ನ ಭೇದಿಸಿದ ಮೀರತ್‌ನ ರೋಹ್ತಾ ಪೊಲೀಸರು ಆರೋಪಿ ಪತ್ನಿ, ಆಕೆಯ ಪ್ರಿಯಕರ ಹಾಗೂ ಅವನ ಇಬ್ಬರು ಸಹಚರರನ್ನ ಬಂಧಿಸಿದ್ದಾರೆ.
ಪೊಲೀಸರ ತನಿಖೆಯಲ್ಲಿ ತಿಳಿದ ಪ್ರಕಾರ ಅನಿಲ್ ಪತ್ನಿ, ಕಾಜಲ್ ಅದೇ ಗ್ರಾಮದ ಆಕಾಶ್ ಎಂಬ ಯುವಕನೊಂದಿಗೆ ಸಂಬಂಧ ಹೊಂದಿದ್ದಳು. ಇದು ಗ್ರಾಮಸ್ಥರಿಗೂ ಗೊತ್ತಾಗಿ, ಪಂಚಾಯ್ತಿ ಸೇರಿಸಿದ್ರು. ಆದ್ರೆ ಮರ್ಯಾದೆ ಹೋಗುತ್ತೆ ಅನ್ನೋ ಕಾರಣಕ್ಕೆ ಅನಿಲ್ ಕುಟುಂಬ ಈ ವಿಷಯವನ್ನ ಒಪ್ಪಿಕೊಳ್ಳದೇ ಮುಚ್ಚಿಟ್ಟರು, ಬಳಿಕ ಪಂಚಾಯ್ತಿಯಲ್ಲಿ ಕಾಜಲ್‌ಗೆ ಬುದ್ಧಿ ಹೇಳಿ ಕಳಿಸಲಾಗಿತ್ತು. ಇದಾದಮೇಲೂ ಕಾಜಲ್ ಮತ್ತು ಆಕಾಶ್ ರಹಸ್ಯವಾಗಿ ಸೇರುತ್ತಿದ್ರು. ಪರಸ್ಪರ ಭೇಟಿ ಆಗೋದನ್ನ ಮುಂದುವರಿಸಿದ್ರು. ಅನಿಲ್ ಕೆಲಸಕ್ಕೆ ಹೋದ ಮೇಲೆ ಕಾಜಲ್ ಆಕಾಶ್ ಜೊತೆ ಸೇರಿ ಕಾಮದಾಟವಾಡುತ್ತಿದ್ದಳು. ಇದೆಲ್ಲವೂ ತನಿಖೆ ವೇಳೆ ಬಯಲಾಗಿದೆ ಎಂದು ರೋಹ್ತಾ ಎಸ್ಪಿ ತಿಳಿಸಿದ್ದಾರೆ.
ಮೊದಲು ಕಾಜಲ್ ರಾತ್ರಿ ಊಟದಲ್ಲಿ ಮತ್ತು ಬರುವ ಔಷಧಿ ಬೆರಸಿ ಕೊಟ್ಟಿದ್ದಳು. ಅನಿಲ್ ಪ್ರಜ್ಞೆ ತಪ್ಪಿದಾಗ, ಮೊದಲೇ ಪ್ಲ್ಯಾನ್ ಮಾಡಿದಂತೆ ತನ್ನ ಸ್ನೇಹಿತನೊಟ್ಟಿಗೆ ಬಂದ ಆಕಾಶ್, ಅನಿಲ್‌ನನ್ನ ಬೈಕ್‌ನಲ್ಲಿ ಸಿವಾಲ್ ಖಾಸ್ ಗ್ಯಾಂಗ್ ಕಾಲುವೆ ಬಳಿಗೆ ಕರೆದೊಯ್ದ. ಅಲ್ಲಿ ಕಾಜಲ್ ಸ್ಕಾರ್ಫ್‌ನಿಂದ ಕುತ್ತಿಗೆ ಹಿಸುಕಿದಳು, ಆದ್ರೆ ಅನಿಲ್ ಸಂಪೂರ್ಣವಾಗಿ ಸತ್ತಿರಲಿಲ್ಲ. ಅನಿಲ್ ಇನ್ನೂ ಉಸಿರಾಡುತ್ತಿರುವುದನ್ನ ಕಂಡ ಆಕಾಶ್ ಕಾಲುವೆಗೆ ಎಸೆದ. ಬಳಿಕ ಕಾಜಲ್ ಆ ಸ್ಕಾರ್ಫ್‌ಅನ್ನು ಅಲ್ಲೇ ಇದ್ದ ಪೊದೆಗೆ ಎಸೆದಿದ್ದಳು. ಪೊಲೀಸರು ಸ್ಥಳ ಪರಿಶೀಲನೆ ನಡೆಸುವಾಗ ಈ ಸ್ಕಾರ್ಫ್ ವಶಪಡಿಸಿಕೊಂಡಿದ್ದರು.ನಂತರ ತೀವ್ರ ತನಿಖೆಯಲ್ಲಿ ಸತ್ಯ ಒಪ್ಪಿಕೊಂಡರು
ಸದ್ಯ ಮೂವರನ್ನು ಬಂಧಿಸಿರುವ ಪೊಲೀಸರು ಮೃತ ಅನಿಲ್ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ :ಕೋಲ್ಕತ್ತಾದಲ್ಲಿ ಅಜ್ಜಿ ಪಕ್ಕ ಮಲಗಿದ್ದ 4 ವರ್ಷದ ಬಾಲಕಿಯ ಅಪಹರಿಸಿ, ಅತ್ಯಾಚಾರ!



















