ದಾವಣಗೆರೆ: 25ರ ವಯಸ್ಸಿನ ಮಗಳ ಗಂಡನ ಜೊತೆ 55 ವಯಸ್ಸಿನ ಅತ್ತೆ ಪರಾರಿಯಾಗಿರುವ ಘಟನೆಯೊಂದು ನಡೆದಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಾಂತಾ ಎಂಬ 55ರ ಆಂಟಿ ಜೊತೆ 25 ವಯಸ್ಸಿನ ಯುವಕ ಗಣೇಶ್ ಪರಾರಿಯಾಗಿದ್ದಾನೆ. ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದ ಗಣೇಶ್, ಹೆಂಡತಿ ಹೇಮಾಳನ್ನು 3ಚನ್ನಗಿರಿ ಬಸ್ ಸ್ಟಾಪ್ ನಲ್ಲಿ ಬಿಟ್ಟು ಅತ್ತೆ ಜೊತೆ ಪರಾರಿಯಾಗಿದ್ದಾನೆ.
ಏನಿದು ಕೇಸ್?
ಓಡಿ ಹೋಗಿರುವ ಅತ್ತೆ ಶಾಂತಾ, ಮುದ್ದೇನಹಳ್ಳಿ ಗ್ರಾಮದ ನಾಗರಾಜ್ ಎಂಬುವವರ ಎರಡನೇ ಪತ್ನಿ ಎನ್ನಲಾಗಿದೆ. ಕಳೆದ 13 ವರ್ಷಗಳ ಹಿಂದೆ ಶಾಂಕಾ, ನಾಗರಾಜ್ ಜೊತೆ ಮದುವೆಯಾಗಿದ್ದಳು. ನಾಗರಾಜ್ ಮೊದಲ ಪತ್ನಿಗೆ ಎರಡು ಹೆಣ್ಣು ಮಕ್ಕಳಿದ್ದವು. ಮೊದಲ ಪತ್ನಿಯ ಮಗಳು ಹೇಮಾ ಜೊತೆ ಗಣೇಶ್ ನಿಗೆ ಮದುವೆ ಮಾಡಲಾಗಿತ್ತು. ಆದರೆ, ಮದುವೆಯಾದ 15 ದಿನಗಳಲ್ಲಿ ಗಣೇಶ್, ಹೇಮಾಳ ಮಲತಾಯಿ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಾನೆ ಎನ್ನಲಾಗಿದೆ.
ಇಬ್ಬರೂ ಅಶ್ಲೀಲ ಮೆಸೇಜ್ ಮಾಡುತ್ತಿದ್ದರು ಎನ್ನಲಾಗಿದೆ. ಈ ವಿಚಾರ ಮನೆಯಲ್ಲಿ ಗೊತ್ತಾಗುತ್ತಿದ್ದಂತೆ ಮನೆಯಲ್ಲಿದ್ದ ಹಣ, ಆಭರಣ ಕದ್ದು ಶಾಂತಾ, ಅಳಿಯನ ಜೊತೆ ಪರಾರಿಯಾಗಿದ್ದಾಳೆ. ಈ ಕುರಿತು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ನ್ಯಾಯ ಕೊಡಿಸಬೇಕಿರುವ ಪೊಲೀಸರೇ ಈಗ ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಹೇಮಾ ಹಾಗೂ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.



















