ಬಾಗಲಕೋಟೆ: ಪತಿ ಕಿರುಕುಳದಿಂದ ಬೇಸತ್ತು 3 ವರ್ಷದ ಮಗನ ಜೊತೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ಚೆನ್ನಮ್ಮ ದೇವಿ ದೇವಸ್ಥಾನದ ಬಳಿ ನಡೆದಿದೆ. ತಾಯಿ ಫಾತಿಮಾ(21) ಮತ್ತು ಪುತ್ರ ಅಬ್ದುಲ್ (3) ಮೃತರು.
ಮಗಳ ಸಾವಿಗೆ ಪತಿ ಮಸ್ತಾನ್ ಸಾಬ್ ಕಿರುಕುಳವೇ ಕಾರಣ ಎಂದು ಫಾತಿಮಾ ಪೋಷಕರು ಆರೋಪಿಸಿದ್ದಾರೆ. ಸದ್ಯ ಘಟನಾ ಸಂಬಂಧ ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.