ಬೆಂಗಳೂರು: ಒಂದೇ ವೇದಿಕೆ ಮೇಲೆ ತಾಯಿ (Mother) ಹಾಗೂ ಮಗ (son) ಪದವಿ ಪಡೆದಿರುವ ಅಪರೂಪದ ಘಟನೆಯೊಂದು ನಡೆದಿದೆ.
ಬೆಂಗಳೂರಿನ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಿಂದ (ಐಐಐಟಿ-ಬಿ) ಈ ಘಟನೆ ನಡೆದಿದೆ. 48 ವರ್ಷದ ರಂಜನಿ ನಿರಂಜನ್ ಪಿಎಚ್ ಡಿ ಪದವಿ ಪಡೆದರೆ, ತಮ್ಮ 22 ವರ್ಷದ ಮಗ ರಾಘವ ಎಸ್. ಎನ್ ಎಂ ಟೆಕ್ ಪದವಿ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ತಾಯಿ ರಂಜನಿ, ಮಗ ರಾಘವನೊಂದಿಗೆ ನಾನು ಪದವಿ ಪಡೆಯುವುದು ಖುಷಿ ತಂದಿದೆ. ಇದು ನಮ್ಮ ಕುಟುಂಬದ ಸಾಧನೆ. ನಾನು ನನಗಿಂತ 13 ವರ್ಷ ಕಿರಿಯ ವಿದ್ಯಾರ್ಥಿಗಳೊಂದಿಗೆ ತರಗತಿಯಲ್ಲಿ ಕುಳಿತಿದ್ದೇನೆ. ಇದು ಮೊದಲು ಕಷ್ಟವಾಗಿದ್ದರೂ ಸಮಯ ಕಳೆದಂತೆ ಎಲ್ಲವು ಸರಿಯಾಯಿತು. ಆನಂತರ ನಾವೆಲ್ಲರೂ ಕೇವಲ ಕಲಿಯುವವರು ಅನಿಸುತ್ತಿತ್ತು.

ರಂಜನಿ ಅವರು ಪದವಿ ಪಡೆದುಕೊಳ್ಳುವುದಕ್ಕೂ ಮುಂಚೆ ಪಿಇಎಸ್ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದ ಎಂದು ಹೇಳಿದ್ದಾರೆ.
ಮಗ ರಾಘವ ಮಾತನಾಡಿ, ತಾಯಿಯೊಂದಿಗೆ ಸಂತೋಷದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ತಾನು ತನ್ನ ತಾಯಿಗೆ ಹೇಗೆ ತಿಳಿ ಹೇಳುತ್ತಿದ್ದರು ಎಂಬುವುದನ್ನು ಹಂಚಿಕೊಂಡಿದ್ದಾರೆ. ಅಮ್ಮ ನನ್ನ ಸಹಾಯವನ್ನು ಗಣಿತದ ಪ್ರಶ್ನೆಗಳಿಗೆ, ಅದರಲ್ಲೂ 12ನೇ ತರಗತಿಯ ಪರಿಕಲ್ಪನೆಗಳಿಗೆ ಕೇಳುತ್ತಿದ್ದರು. ಅದು ತುಂಬಾ ರೋಮಾಂಚಕಾರಿ ಮತ್ತು ವಿನೋದಮಯವಾಗಿತ್ತು ಎಂದು ಹೇಳಿದ್ದಾರೆ.
