ನಿಯಾಮಿ: ಮಸೀದಿ (Mosque) ಮೇಲೆ ಇಸ್ಲಾಂ ಉಗ್ರರು (Islamist Militants) ದಾಳಿ ನಡೆಸಿದ್ದು, ಕನಿಷ್ಠ 44 ಜನ ಸಾವನ್ನಪ್ಪಿ, 13 ಜನ ಗಾಯಗೊಂಡಿರುವ ಘಟನೆ ನಡೆದಿದೆ.
ಈ ಘಟನೆ ನೈಋತ್ಯ ನೈಜರ್‌ನಲ್ಲಿ (Niger) ನಡೆದಿದೆ. ನೈಜರ್, ಬುರ್ಕಿನಾ ಫಾಸೊ ಮತ್ತು ಮಾಲಿಯ ತ್ರಿ-ಗಡಿ ಪ್ರದೇಶದ ಹತ್ತಿರದ ಕೊಕೊರೌ ಫೋಂಬಿಟಾ ಗ್ರಾಮದಲ್ಲಿ ಮಧ್ಯಾಹ್ನದ ಪ್ರಾರ್ಥನೆಯ ಸಮಯದಲ್ಲಿ ಈ ದಾಳಿ ನಡೆದಿದೆ. ಇಸ್ಲಾಮಿಕ್ ಸ್ಟೇಟ್ ಅಂಗಸಂಸ್ಥೆಯಾದ ಇಸ್ಲಾಮಿಕ್ ಸ್ಟೇಟ್ ಇನ್ ದಿ ಗ್ರೇಟರ್ ಸಹರಾ(ISGS) ಗುಂಪಿನ ಉಗ್ರರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಪವಿತ್ರ ರಂಜಾನ್ ತಿಂಗಳಲ್ಲಿ ಪ್ರಾರ್ಥನೆಗಾಗಿ ಜನರು ಸೇರಿದ್ದ ವೇಳೆ ಮಸೀದಿಯನ್ನು ಸುತ್ತುವರೆದು ಈ ಹತ್ಯಾಕಾಂಡ ನಡೆಸಿದ್ದಾರೆ ಎನ್ನಲಾಗಿದೆ. ಮಾರುಕಟ್ಟೆ ಮತ್ತು ಮನೆಗಳಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ನೈಜರ್ ಸರ್ಕಾರ ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ. ಈ ಘಟನೆಯನ್ನು ಇಡೀ ವಿಶ್ವವೇ ಖಂಡಿಸಿದೆ.