ಭಾರತದ ನೆರವಿನಿಂದಲೇ ಉದಯಿಸಿದ ಬಾಂಗ್ಲಾದೇಶವು ಈಗ ಮಗ್ಗುಲ ಮುಳ್ಳಾಗಿ ಕೂತಿದೆ. ಭಾರತ ವಿರೋಧಿ, ಅದರಲ್ಲೂ, ಹಿಂದುಗಳ ಮೇಲೆ ದೌರ್ಜನ್ಯ ಎಸಗುವ ಮೂಲಕ ಭಾರತೀಯರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ. ಅಸಲಿಗೆ ಕೇಂದ್ರ ಸರ್ಕಾರ ನೀಡಿದ ಮಾಹಿತಿ ಪ್ರಕಾರ, ಪಾಕಿಸ್ತಾನಕ್ಕಿಂತ ಬಾಂಗ್ಲಾದೇಶದಲ್ಲೇ ಹಿಂದುಗಳ ಮೇಲೆ ನಡೆಯುವ ದಾಳಿಗಳ ಪ್ರಮಾಣ 20 ಪಟ್ಟು ಹೆಚ್ಚಾಗಿವೇ ಎಂದರೆ ಪಾಪಿಗಳಿಗಿಂತ, ದುಷ್ಟರ ಅಟ್ಟಹಾಸವೇ ಭಾರತಕ್ಕೆ ನುಂಗಲಾರದ ತುತ್ತಾಗಿದೆ.
ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಸತತ ದಾಳಿಯ ಕುರಿತು ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಹಿಂದುಗಳ ಮೇಲೆ ಪಾಕಿಸ್ತಾನಕ್ಕಿಂತ ಹೆಚ್ಚು ಬಾಂಗ್ಲಾದೇಶದಲ್ಲಿಯೇ ದಾಳಿನಡೆಯುತ್ತಿವೆ. ಪ್ರಸಕ್ತ ವರ್ಷದಲ್ಲಿಯೇ 2,200 ಹಿಂದೂಗಳ ಮೇಲೆ ಬಹುಸಂಖ್ಯಾತರು ದಾಳಿ ನಡೆಸಿದ್ದಾರೆ ಎಂಬ ಭಯಂಕರ ಮಾಹಿತಿ ತೆರೆದಿಟ್ಟಿದೆ.
ಹಿಂದುಗಳ ಮೇಲೆ ನಡೆದ ದಾಳಿಗಳ ಸಂಖ್ಯೆ
ವರ್ಷ ಬಾಂಗ್ಲಾದೇಶ ಪಾಕಿಸ್ತಾನ
2022 47 241
2023 302 103
2024 2,200 112
ಹೌದು, ಭಾರತದ ಮೇಲೆ ಮೊಹಮ್ಮದ್ ಘಜ್ನಿ ದಾಳಿ ನಡೆಸಿದಂತೆ, ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ದಾಳಿಗಳು ನಿರಂತರವಾಗಿ ನಡೆಯುತ್ತಿವೆ. ಹಿಂದೂಗಳ ಮೇಲೆ ಹಲ್ಲೆ, ಮನೆಗೆ ನುಗ್ಗಿ ಕಳ್ಳತನ, ದೇವಾಲಯಗಳಿಗೆ ನುಗ್ಗಿ ಚಿನ್ನಾಭರಣಗಳ ದರೋಡೆ, ಹಿಂದು ಸನ್ಯಾಸಿಗಳ ದಾಳಿಯ ಮೂಲಕ ಬಾಂಗ್ಲಾದೇಶದ ಬಹುಸಂಖ್ಯಾತ ಮುಸ್ಲಿಮರು ಹಿಂದು ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ಪ್ರಸಕ್ತ ವರ್ಷದಲ್ಲೇ ಹಿಂದುಗಳ ಮೇಲಿನ ದಾಳಿಯು ಶೇ.628ರಷ್ಟು ಏರಿಕೆಯಾಗಿರುವುದೇ ಇದಕ್ಕೆ ನಿದರ್ಶನವಾಗಿದೆ.
ಧರ್ಮದ ಆಧಾರದ ಮೇಲೆ ಉದಯಿಸಿದ ಪಾಕಿಸ್ತಾನದಿಂದ ಬೇರ್ಪಟ್ಟಿರುವ ಬಾಂಗ್ಲಾದೇಶದಲ್ಲಿ ಸಹಜವಾಗಿಯೇ ಹಿಂದು ಅಲ್ಪಸಂಖ್ಯಾತರ ಮೇಲೆ ದ್ವೇಷ ಕಾರಲಾಗುತ್ತಿದೆ. ಅದರಲ್ಲೂ, ಶೇಖ್ ಹಸೀನಾ ಅವರು ಭಾರತದ ಪರವಾಗಿದ್ದರು. ಅಲ್ಲದೆ, ಅವರ ವಿರುದ್ಧ ಜನ ದಂಗೆಯೆದ್ದ ಬಳಿಕ ಆಕೆಗೆ ಭಾರತದಲ್ಲೇ ಆಶ್ರಯ ನೀಡಲಾಗಿದೆ. ಇದರಿಂದಾಗಿ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ ಎಂಬುವುದು ತಜ್ಞರ ಲೆಕ್ಕಾಚಾರ.
ಪ್ಯಾಲೆಸ್ತೀನ್ ಹಿಂಸಾಚಾರವನ್ನು ಖಂಡಿಸಿದ್ದ, ಅಲ್ಲಿನ ಜನರ ಪರವಾಗಿ ಧ್ವನಿಎತ್ತಿದ್ದ ಭಾರತದ ಬುದ್ಧಿ ಜೀವಿಗಳಿಗೆ ಬಾಂಗ್ಲಾ ಹಿಂದುಗಳ ಶೋಚನೀಯ ಸ್ಥಿತಿ ಮಾತ್ರ ಕಣ್ಣಿಗೆ ಕಾಣಿಸ್ತಿಲ್ಲವಲ್ಲ. ಹಿಂದುಗಳ ಮಾರಣಹೋಮವಾದರೂ ಪ್ರತಿಪಕ್ಷಗಳು ಹಿಂದೂಗಳ ರಕ್ಷಣೆಯ ಕುರಿತು ಸೊಲ್ಲೆತ್ತುತ್ತಿಲ್ಲ.
ಶೇಖ್ ಹಸೀನಾ ಪದಚ್ಯುತಿ ಬಳಿಕ ಮಧ್ಯಂತರ ಸರ್ಕಾರದ ನೇತೃತ್ವ ವಹಿಸಿಕೊಂಡಿರುವ ಮೊಹಮ್ಮದ್ ಯೂನಸ್ ಅವರು ಮಗುಮ್ಮಾಗಿ ಕುಳಿತಿದ್ದಾರೆ. ಹಿಂದೂಗಳ ಮೇಲೆ ದಾಳಿ ನಡೆದರೂ ನೊಬೆಲ್ ಶಾಂತಿ ಪುರಸ್ಕೃತ ಮೊಹಮ್ಮದ್ ಯೂನಸ್ ಅವರು ಹಿಂಸಾಚಾರ ನಿಲ್ಲಿಸಲು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇದರಿಂದಾಗಿ ಲಕ್ಷಾಂತರ ಹಿಂದುಗಳ ಪ್ರಾಣವು ಅಪಾಯದಲ್ಲಿದ್ದು, ಕಣ್ಣುಮುಚ್ಚಿ ಕುಳಿತಿರುವ ವಿಶ್ವಸಂಸ್ಥೆಯಾದರೂ ಇತ್ತ ನೋಡಬೇಕಿದೆ. ಕಾಶ್ಮೀರ ವಿಷಯದಲ್ಲಿ ಮೂಗು ತೂರಿಸುವ ಮಾನವ ಹಕ್ಕುಗಳ ಸಂಸ್ಥೆಯು ಬಾಂಗ್ಲಾ ಹಿಂದೂಗಳ ವಿಚಾರದಲ್ಲಿ ತುಟಿಬಿಚ್ಚಬೇಕಿದೆ.
ಇನ್ನೊಂದೆಡೆ ಶೇಖ್ ಹಸಿನಾಗೆ ತೋರಿರುವ ಮಾನವೀಯತೆಯು ಅಲ್ಲಿನ ಹಿಂದೂ ಬಾಂಧವರ ಮೇಲೂ ಕೇಂದ್ರ ಸರ್ಕಾರದ ಕಟ್ಟು- ನಿಟ್ಟಿನಲ್ಲಿ ದೃಷ್ಟಿ ಬೀಳಬೇಕಿದೆ. ಮನುಷ್ಯತ್ವ ಮರೆತು ರಾಕ್ಷಸರಂತೆ ಅಟ್ಟಹಾಸ ಮೆರೆಯುತ್ತಿರುವ ದುಷ್ಟ ಬಾಂಗ್ಲಾದೇಶ ಭಯೋತ್ಪಾದಕರ ಮೇಲೆ ಕಠಿಣ ಕ್ರಮಕ್ಕೆ ಭಾರತ ಕಂಕಣ ಬದ್ಧವಾಗಿ ನಿಲ್ಲಬೇಕಿದೆ. ಅಸಲಿಗೆ ಹಿಂದೂ ಬಾಂಧವರು ಭಾರತೀಯರು ಎಂಬ ಹಣಎ ಪಟ್ಟಿ ಹೊತ್ತಿದ್ದರಿಂದಲೇ ಅವರಿಗೆ ಅಲ್ಲಿ ನರಕ ಎದುರಾಗಿರೋದು. ಆ ನಿಟ್ಟಿನಲ್ಲಿ ಭಾರತ ಬಾಂಗ್ಲಾ ಬಂಧುಗಳ ನೆರವಿಗೆ ನಿಲ್ಲಲೇಬೇಕಿದೆ. ಅಲ್ಲಿ ದೌರ್ಜನ್ಯ ನಿಲ್ಲಲಿ….ಮತ್ತೆ ಶಾಂತಿ ನೆಲೆಸಲಿ ಎಂಬ ಆಶಯ ನಮ್ಮದು…ವಂದನೆಗಳು…