ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಬೆಳಕಿಗೆ ಬರುತ್ತಲೇ ಇದ್ದು, ಆಕ್ರೋಶ ವ್ಯಕ್ತವಾಗುತ್ತಿದೆ.
ಪುತ್ತೂರಿನ ಬಿರುಮಲೆಗುಡ್ಡದಲ್ಲಿ ವಿಹರಿಸುತ್ತಿದ್ದ ಜೋಡಿಯ ಮೇಲೆ ಕೆಲವರು ದೌರ್ಜನ್ಯ ಎಸಗಿದ್ದಾರೆ. ದೌರ್ಜನ್ಯ ನಡೆಸಿರುವ ಜೋಡಿಯ ಫೋಟೋ, ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿ ದುಷ್ಕರ್ಮಿಗಳು ಅವಾಚ್ಯವಾಗಿ ನಿಂದಿಸಿದ್ದಾರೆ. ಅಲ್ಲದೇ, ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಪುತ್ತೂರಿನ ಬಿರುಮಲೆಗುಡ್ಡ ಅನೈತಿಕ ಚಟುವಟಿಕೆಗಳ ಅಡ್ಡೆಯಾಗಿ ಗುರುತಿಸಿಕೊಂಡಿದೆ. ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಪ್ರಣಯ ತಾಣ, ಕುಡುಕರ ಮಜಾ ತಾಣವಾಗಿ ಈಗ ಮಾರ್ಪಟ್ಟಿದೆ. ಹೀಗಾಗಿಯೇ ಕೆಲವು ದುಷ್ಕರ್ಮಿಗಳು ಅಲ್ಲಿ ನೈತಿಕ ಪೊಲೀಸ್ ಗಿರಿ ಕೂಡ ನಡೆಸುತ್ತಿದ್ದಾರೆ. ಕೂಡಲೇ ಸ್ಥಳೀಯ ಆಡಳಿತ ಈ ಕುರಿತು ಕ್ರಮ ವಹಿಸಬೇಕಿದೆ ಎಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.