ಮಂಡ್ಯ : ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಹಲವು ವರ್ಷಗಳಿಂದ ಕೋತಿ ದಾಳಿ ಹೆಚ್ಚಾಗುತ್ತಿತ್ತು.ಇದೀಗ ಅಲ್ಲಿದ್ದ ಕೋತಿಗಳನ್ನು ಸೆರೆ ಹಿಡಿಯಲಾಗಿದೆ. ಇದರಿಂದ ಭಕ್ತರು ನಿಟ್ಟೂಸಿರು ಬಿಟ್ಟಿದ್ದಾರೆ.
ಭಕ್ತರು ಹಾಗೂ ರೈತರ ದೂರಿನ ಬಳಿಕ ಎಚ್ಚೆತ್ತ ಅಧಿಕಾರಿಗಳು, ಚಲುವನಾರಾಯಣಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸ್ಥಳೀಯ ಗ್ರಾ.ಪಂ ಸಹ ಬಾಗಿತ್ವದಲ್ಲಿ ಸುಮಾರು 10 ದಿನಗಳ ಕಾಲ ಕಾರ್ಯಾಚರಣೆ ನಡೆಸಿದ್ದಾರೆ.
ಸಾವಿರಾರು ಕೋತಿಗಳಿರುವ ಮೇಲುಕೋಟೆಯಲ್ಲಿ ಈಗಾಗಲೇ 100ಕ್ಕೂ ಹೆಚ್ಚು ಕೋತಿಗಳನ್ನು ಸೆರೆ ಹಿಡಿದಿದ್ದಾರೆ. ಮನುಷ್ಯರ ಮೇಲೆ ದಾಳಿ ಹಾಗೂ ಬೆಳೆ ನಾಶದ ಹಿನ್ನೆಲೆಯಿಂದ ಸೆರೆ ಹಿಡಿಯಲಾಗಿತ್ತು. ಸೆರೆ ಸಿಕ್ಕ ಕೋತಿಗಳನ್ನ ಬಂಡೀಪುರಕ್ಕೆ ಬಿಡಲು ನಿರ್ಧಾರಿಸಲಾಗಿದೆ.
ಇದನ್ನೂ ಓದಿ : ರಾಹುಲ್ ಗಾಂಧಿ ಕಾಂಗ್ರೆಸ್‌ನ್ನು ಎಷ್ಟು ಚುನಾವಣೆಗಳಲ್ಲಿ ಸೋಲಿಸಿದ್ದಾರೋ ಲೆಕ್ಕವೇ ಇಲ್ಲ | ಆರ್.ಅಶೋಕ್ ಲೇವಡಿ



















