ಬೆಂಗಳೂರು: ಚಿಟ್ ಫಂಡ್ ಡೆವಲಪ್ಮೆಂಟ್ ಆಫೀಸರ್ ನನ್ನು ವ್ಯಕ್ತಿಯೊಬ್ಬಾತ ಹತ್ಯೆ ಮಾಡಿ ತುಂಡು ತುಂಡಾಗಿ ಕತ್ತರಿಸಿರುವ ಘಟನೆ ನಡೆದಿದೆ.
ಈ ಘಟನೆ ಬೆಂಗಳೂರಿನ (Bengaluru) ರಾಮಮೂರ್ತಿ ನಗರ (Ramamurthy Nagar)ದಲ್ಲಿ ನಡೆದಿದೆ. ಕೆ.ವಿ.ಶ್ರೀನಾಥ್ (34) ಕೊಲೆಯಾದ ವ್ಯಕ್ತಿ. ಮಾಧವ ರಾವ್ ಕೊಲೆ ಆರೋಪಿ ಎನ್ನಲಾಗಿದೆ. ಮೇ 28ರಂದು ಮನೆಯಿಂದ ಆಚೆ ಹೋಗಿದ್ದ ಶ್ರೀನಾಥ್ ಮನೆಗೆ ಬಂದಿರಲಿಲ್ಲ. ಹೀಗಿಗ ಅವಪ ಪತ್ನಿ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿದಾಗ ಶ್ರೀನಾಥ್ ನು ಮಾಧವ ರಾವ್ ಮನೆಗೆ ಹೋಗಿರುವುದು ಪತ್ತೆಯಾಗಿತ್ತು. ಕೆ.ಆರ್.ಪುರಂನ ವಿಜಿನಪುರದಲ್ಲಿರುವ ಮಾಧವ ರಾವ್ ಮನೆಗೆ ಶ್ರೀನಾಥ್ ಹೋಗಿರುವುದು ಪತ್ತೆಯಾಗಿದೆ. ಮನೆಯ ಸಿಸಿಟಿವಿಯಲ್ಲಿ ಮಾಧವ ರಾವ್ ಮನೆಗೆ ಶ್ರೀನಾಥ್ ಎಂಟ್ರಿ ಆಗಿರುವುದು ಕೂಡ ಪತ್ತೆಯಾಗಿದೆ. ಆದರೆ ಶ್ರೀನಾಥ್ ಮನೆಯಿಂದ ಹೊರಗೆ ಹೋಗುವುದು ರೆಕಾರ್ಡ್ ಆಗಿರಲಿಲ್ಲ. ಜೊತೆಗೆ ಮನೆಯ ಒಳಗಡೆ ಪರಿಶೀಲನೆ ಮಾಡಿದಾಗ ರಕ್ತದ ಕಲೆಗಳು ಸಿಕ್ಕಿವೆ.
ಕೊಲೆ ಮಾಡಿ ಮಾಧವ್ ರಾವ್ ತಲೆ ಮರೆಸಿಕೊಂಡಿದ್ದ. ಪೊಲೀಸರು ಆತನನ್ನು ಆಂಧ್ರದಲ್ಲಿ ಬಂಧಿಸಿದ್ದಾರೆ. ಮಾಧವ ರಾವ್ ಮತ್ತು ಶ್ರೀನಾಥ್ ಗೆ ಎರಡು ವರ್ಷದಿಂದ ಪರಿಚಯ ಇತ್ತು. ಶ್ರೀನಾಥ್ ಬಳಿ ಮಾಧವ ರಾವ್ 5 ಲಕ್ಷ ರೂ. ಹಣದ ಚೀಟಿ ಹಾಕಿದ್ದ. ಈ ಚೀಟಿ ಹಣದ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ ಎಂದು ಮಾಧವ್ ರಾವ್ ಹೇಳಿದ್ದಾನೆ.
ಅಲ್ಲದೇ, ಮಾಧವ ರಾವ್ ಪತ್ನಿ ಜೊತೆ ಶ್ರೀನಾಥ್‌ಗೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಈ ಮಧ್ಯೆ ಶ್ರೀನಾಥ್ ನು ಮನೆಗೆ ಬಂದಿದ್ದಾನೆ. ಈ ವೇಳೆ ಇಬ್ಬರಿಗೂ ಜಗಳವಾಗಿದೆ. ಅದು ವಿಕೋಪಕ್ಕೆ ತೆರಳಿ ರಾಡ್‌ನಿಂದ ಶ್ರೀನಾಥ್ ತಲೆಗೆ ಹೊಡೆದಿದ್ದಾನೆ. ನಂತರ ಆತನ ದೇಹವನ್ನು ಮಾಧವ ರಾವ್ ಮಚ್ಚಿನಿಂದ ತುಂಡು ತುಂಡಾಗಿ ಕತ್ತರಿಸಿದ್ದಾನೆ. ಸಾಕ್ಷಿ ನಾಶ ಮಾಡಲು ಶ್ರೀನಾಥ್ ಮೃತದೇಹವನ್ನು ಮೂರು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ, ಬೆಳತ್ತೂರು ಮೋರಿಯಲ್ಲಿ ಹಾಕಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.