ಸಿಎಂ ಬದಲಾವಣೆ ಬಗ್ಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಬಗ್ಗೆ ಮಾತನಾಡಬಾರದು ಎಂದು ನಮಗೆ ಖರ್ಗೆ ಸಾಹೇಬರು ಅಪ್ಪಣೆ ಮಾಡಿದ್ದಾರೆ. ಈ ಎಲ್ಲದರ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ವಿಧಾನ ಪರಿಷತ್ ನ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದ್ದಾರೆ.
ನಮ್ಮದು ಡೆಮಾಕ್ರಟಿಕ್ ಪಾರ್ಟಿ,ಬಿಜೆಪಿ ತರ ಮೋದಿ ಪಾರ್ಟಿ ಅಲ್ಲ. ಮೋದಿಯವರು ಹೇಳಿದ್ರೆ ಅರ್ಧ ಗಂಟೆಯಲ್ಲಿ ಆಗುತ್ತದೆ. ನಮ್ಮಲ್ಲಿ ಚರ್ಚೆ ಮತ್ತು ವಿಶ್ಲೇಷಣೆ ಗಳು ಆಗುತ್ತವೆ. ಮಲ್ಲಿಕಾರ್ಜುನ ಖರ್ಗೆಯವರ ದೊಡ್ಡತನ ಸ್ವಲ್ಪ ನೋಡಿ. ನಾನೇ ಪ್ರೆಸಿಡೆಂಟ್ ತಿರ್ಮಾನ ಮಾಡುತ್ತೇನೆ ಎಂದು ಹೇಳಬಹುದಿತ್ತು. ಆದರೆ ಕುಳಿತು ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ, ಅದು ಅವರ ದೊಡ್ಡತನ ಎಂದಿದ್ದಾರೆ
75 ವರ್ಷ ಆದವರೂ ನಿವೃತ್ತಿ ಪಡೆಯಲಿ ಎಂದು RSS ನ ಮುಖ್ಯಸ್ಥರು ಮೋಹನ್ ಭಾಗವತ್ ಹೇಳಿರುವುದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಅದು ಬಿಜೆಪಿ ಮತ್ತು ಆರ್ ಎಸ್ ಎಸ್ ಅವರ ಆಂತರಿಕ ವಿಚಾರ. ಬಿಜೆಪಿ ಆರ್ ಎಸ್ ಎಸ್ ಸಂಘಟನೆಯದ್ದೇ ಆಗಿದೆ. ಭಾಗವತ್ ಅವರು ಮೋದಿಯವರೆ ವರ್ಷ 75 ಆಗುತ್ತಿದೆ. ನೀವು ಬಿಟ್ಟಕೊಡಿ ಎನ್ನುವ ಮಾತು ಹೇಳಿದ್ದಾರೆ. ಬಿಜೆಪಿಯ 75ರ ಪಾಲನೆ ಮಾಡ್ತರೋ ಇಲ್ಲವೋ ಎಂದು ಕಾದು ನೋಡಬೇಕಿದೆ. ಬಿಟ್ಟುಕೊಡದಿದ್ದರೇ, ಮೋದಿ ವಚನಭ್ರಷ್ಟರಾಗುತ್ತಾರೆ. ಬಿಜೆಪಿಯಲ್ಲಿ ಕ್ರಾಂತಿ ಅಂದರೆ ಮೋದಿಯವರ ರಾಜೀನಾಮೆ. ಕ್ರಾಂತಿ ಆಗುವುದು ಅಲ್ಲಿ. ನಮ್ಮಲಿಗ ಶಾಂತಿಯಿದೆ ಎಂದಿದ್ದಾರೆ.



















