ಭಾರತೀಯ ಸೇನೆಗೆ ಪ್ರಧಾನಿ ಮೋದಿ ಫ್ರೀ ಹ್ಯಾಂಡ್ ನೀಡುತ್ತಿದ್ದಂತೆ ಅತ್ತ ಪಾಕ್ ಪ್ರಧಾನಿಗೆ ಚಳಿಜ್ವರ ಹೆಚ್ಚಾಗಿದೆ.
ದಿಢೀರ್ ಬೆಳವಣಿಗೆಯಲ್ಲಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬೆಳವಣಿಗೆ ಖುದ್ದು ಪಾಕಿಸ್ತಾನದಲ್ಲೇ ಅಪಹಾಸ್ಯಕ್ಕೆ ತುತ್ತಾಗಿದೆ. ಪಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನದ ಮೇಲೆ ಭಾರತದ ದಾಳಿಯ ಕಾರ್ಮೋಡ ಆವರಿಸಿದೆ.
ಈ ಆತಂಕದಲ್ಲೇ ಷರೀಫ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಅನ್ನೋ ಚರ್ಚೆ ಶುರುವಾಗಿದೆ. ರಾವಲ್ಪಿಂಡಿಯ ಸೇನಾ ಆಸ್ಪತ್ರೆಗೆ ಷರೀಫ್ ದಾಖಲಾಗಿದ್ದು, ವೈದ್ಯರ ನಿಗಾದಲ್ಲಿ ಚಿಕಿತ್ಸೆ ಮುಂದುವರಿದಿದೆ. ಅಷ್ಟೇ ಅಲ್ಲಾ ಒಂದು ಮೂಲದ ಪ್ರಕಾರ ಪ್ರಧಾನಿ ಷರೀಫ್ ಏಪ್ರಿಲ್ 27ರಂದೇ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗುತ್ತಿದೆ. ಸಾಲದ್ದಕ್ಕೆ ಈ ವಿಚಾರವನ್ನು ಪಾಕ್ ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆಯೂ ಕಟ್ಟಪ್ಪಣೆ ಹೊರಡಿಸಲಾಗಿದೆ.



















