ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನವನ್ನು ಮಕಾಡೆ ಮಲಗಿಸಿದ ಯೋಧರಿಗೆ ಮೋದಿ ಸಲಾಂ ಹೇಳಿದ್ದಾರೆ. ಪಾಕಿಸ್ತಾನದ ವಾಯು ನೆಲೆ ಮತ್ತು ನೌಕಾನೆಲೆಗಳನ್ನು ಹೊಡೆದುರುಳಿಸಿದ ಯೋಧರಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಇಂದು ಬೆಳಗ್ಗೆ ದಿಢೀರ್ ಅಂದಪುರ ಏರ್ ಬೇಸ್ ಗೆ ಆಗಮಿಸಿದ ಮೋದಿ ಯೋಧರೊಟ್ಟಿಗೆ ಸಮಯ ಕಳೆದಿದ್ದಾರೆ. ಪಂಜಾಬ್ ನ ಅಂದಪುರ ಏರ್ ಬೇಸ್ ಗೆ ಆಗಮಿಸಿದ ನಮೋ, ಪಾಕ್ ವಿರುದ್ಧ ಕಾರ್ಯಾಚರಣೆಯಲ್ಲಿ ಭಾಗಿಯಾದ ಸೇನಾನಿಗಳ ಜೊತೆ ಚರ್ಚಿಸಿದ್ರು.

ಪ್ರಧಾನಿಯವರ ಈ ದಿಢೀರ್ ಭೇಟಿ ಯೋಧರಲ್ಲಿ ಹೊಸ ಹುಮ್ಮಸ್ಸು ಮೂಡಿಸಿತ್ತು.