ಬೆಂಗಳೂರು: ದೇಶದ ಅಗ್ರ ಟೆಲಿಕಾಂ ಸಂಸ್ಥೆಯಾಗಿರುವ ರಿಲಯನ್ಸ್ ನ ಜಿಯೋ ಈಗ ಹೊಸ ರಿಚಾರ್ಜ್ ಪ್ಲಾನ್ ಪರಿಚಯಿಸಿದೆ. ಅದರಲ್ಲೂ, ರಿಲಯನ್ಸ್ ಜಿಯೋ ಎಂಟ್ರಿ ಲೆವಲ್ ಪ್ಲಾನ್ ಆಗಿರುವ ನಿತ್ಯ 1 ಜಿಬಿ ಇಂಟರ್ನೆಟ್ ಯೋಜನೆಯು ಇನ್ನುಮುಂದೆ ಗ್ರಾಹಕರಿಗೆ ಲಭ್ಯವಾಗಿರುವುದಿಲ್ಲ. 22 ದಿನಗಳ ವ್ಯಾಲಿಡಿಟಿ ಹೊಂದಿದ್ದ 209 ರೂಪಾಯಿ ಮತ್ತು 28 ದಿನಗಳ ವ್ಯಾಲಿಡಿಟಿಯ 249 ರೂಪಾಯಿ ಯೋಜನೆಯು ರದ್ದಾಗಲಿದೆ.
ಹೊಸ ಪರಿಷ್ಕರಣೆಯ ಪ್ರಕಾರ, ಜಿಯೋ ಎಂಟ್ರಿ ಲೆವೆಲ್ ಅಂದರೆ, ಆರಂಭಿಕ ಪ್ಲಾನ್ 299 ರೂಪಾಯಿ ಮತ್ತು 28 ದಿನಗಳ ವ್ಯಾಲಿಡಿಟಿಯ ಪ್ಲಾನ್ ಆಗಿದ್ದು 1.5 ಜಿಬಿ ಡೇಟಾ ಹೊಂದಲಿದೆ. ಜಿಯೋ ಕಂಪನಿಯು ಈ ಪ್ಲಾನ್ ಗಳ ಬೆಲೆ ಏರಿಕೆ ಮಾಡುವ ಮೂಲಕ ಈಗಾಗಲೇ ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾದ 299 ರೂಪಾಯಿ ಪ್ಲಾನ್ 28 ದಿನಗಳ ವ್ಯಾಲಿಡಿಟಿಗೆ ಸಮಾನ ಯೋಜನೆಯನ್ನು ಜಾರಿಗೆ ತಂದಂತಾಗಿದೆ.
ಐಐಎಫ್ಎಲ್ ಬ್ರೋಕರೇಜ್ ಸಂಸ್ಥೆಯ ಪ್ರಕಾರ ಜಿಯೋದ 249 ರಪಾಯಿ ಪ್ರಿಪೇಯ್ಡ್ ಯೋಜನೆಯು ಜಿಯೋದ ಒಟ್ಟಾರೆ ಮೊಬೈಲ್ ಆದಾಯದಲ್ಲಿ 10% ಕೊಡುಗೆ ನೀಡುತ್ತಿತ್ತು ಮತ್ತು 20% ನಷ್ಟು ಶುಲ್ಕ ಹೆಚ್ಚಳದಿಂದ ಒಟ್ಟಾರೆ ಆದಾಯವು 2% ನಷ್ಟು ಏರಿಕೆಯಾಗಲಿದೆ ಎಂದು ಅಭಿಪ್ರಾಯ ಪಟ್ಟಿದೆ.
ಅಷ್ಟೇ ಅಲ್ಲ, ಮಾರ್ಗನ್ ಸ್ಟ್ಯಾನ್ಲಿ ಪ್ರಕಾರ ಜಿಯೋ 249 ರೂಪಾಯಿ ಯೋಜನೆ ಹಾಗೂ 199 ರೂಪಾಯಿಗಳ (1.5ಜಿಬಿ, 18 ದಿನ) ಜನಪ್ರಿಯ ಪ್ಲಾನ್ ಗಳನ್ನು ರದ್ದುಗೊಳಿಸಲು ಯೋಜಿಸಿದ್ದು, ಇನ್ಮುಂದೆ ಕಡಿಮೆ ಬೆಲೆಯ ಪ್ಲಾನ್ ಆಗಿ 28 ದಿನಗಳ ಯೋಜನೆ 299 ರೂಪಾಯಿಗಳ್ದಾಗಿದೆ ಎಂದು ತಿಳಿದುಬಂದಿದೆ.