ತುಮಕೂರು: ಶಾಸಕ ರಾಮಮೂರ್ತಿ ಅವರ ಸಹೋದರನ ಕಾರು ಡಿಕ್ಕಿಯಾದ ಪರಿಣಾಮ ಪಾದಾಚಾರಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಎಡೆಯೂರು ಹತ್ತಿರ ನಡೆದಿದೆ. ಬೆಂಗಳೂರಿನ ಜಯನಗರದ ಬಿಜೆಪಿ ಶಾಸಕರ ರಾಮಮೂರ್ತಿ ಅವರ ಸಹೋದರನ ಕಾರು ಡಿಕ್ಕಿಯಾದ ಪರಿಣಾಮ ಪಾದಾಚಾರಿ ಸಾವನ್ನಪ್ಪಿದ್ದಾರೆ. ಧರ್ಮಸ್ಥಳಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಕುಣಿಗಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.