ಕೋಲಾರ : ಜಿಲ್ಲೆಯ ಕೆಜಿಎಫ್ ನಗರದ ಎನ್.ಟಿ ಬ್ಲಾಕ್ ನ ಕಾಳಿಕಾಂಬ ದೇವಿ ದೇಗುಲಕ್ಕೆ ಶಾಸಕ ಕೊತ್ತೂರು ಮಂಜುನಾಥ್ ಭೇಟಿ ನೀಡಿದ ಸಂರ್ಭದಲ್ಲಿ ಮಂಗಳಮುಖಿಯರು ಶಾಸಕರ ಮೇಲೆ ಗರಿ ಗರಿ ನೋಟಿನ ಸುರಿಮಳೆಗೈದಿದ್ದಾರೆ.
ಕೋಲಾರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್, ದೇಗುಲ ಉದ್ಘಾಟನೆ ಹಿನ್ನಲೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ದೇಗುಲಕ್ಕೆ ಭೇಟಿ ನೀಡಿದ ವೇಳೆ, ಕೊತ್ತೂರು ಮಂಜುನಾಥ್ ಮೇಲೆ ಗರಿ ಗರಿ ನೋಟುಗಳನ್ನು ಮಂಗಳಮುಖಿಯರು ಎಗರಿಸಿದ್ದಾರೆ. ದೇಗುಲದಲ್ಲಿ ನೋಟಿನ ಹಾರ ಹಾಕಿ ಶಾಸಕರನ್ನು ಮಂಗಳಮುಖಿಯರು ಸನ್ಮಾನಿಸಿದ್ದಾರೆ.