ಪರ್ತ್ : ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ‘ಆ್ಯಶಸ್’ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ 34 ವರ್ಷಗಳ ನಂತರ ಆಶಸ್ ಟೆಸ್ಟ್‌ನಲ್ಲಿ 10 ವಿಕೆಟ್ ಪಡೆದ ಮೊದಲ ಆಸ್ಟ್ರೇಲಿಯಾದ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸ್ಟಾರ್ಕ್ ಮೊದಲ ಇನ್ನಿಂಗ್ಸ್‌ನಲ್ಲಿ ಏಳು ವಿಕೆಟ್ ಸೇರಿದಂತೆ ಒಟ್ಟು 113 ರನ್‌ಗಳಿಗೆ 10 ವಿಕೆಟ್‌ಗಳನ್ನು ಪಡೆದಿದ್ದಾರೆ.
ಎರಡನೇ ಇನ್ನಿಂಗ್ಸ್‌ನಲ್ಲಿ, ಸ್ಟಾರ್ಕ್ ಜ್ಯಾಕ್ ಕ್ರಾಲಿ, ಜೋ ರೂಟ್ ಮತ್ತು ಬೆನ್ ಸ್ಟೋಕ್ಸ್ ಅವರ ವಿಕೆಟ್‌ಗಳನ್ನು ಕಬಳಿಸಿದರು, ಆಸ್ಟ್ರೇಲಿಯಾ ಇಂಗ್ಲೆಂಡ್ ತಂಡವನ್ನು 164 ರನ್‌ಗಳಿಗೆ ಆಲೌಟ್ ಮಾಡಿದೆ.
ಎಡಗೈ ವೇಗಿ 10ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವುದು ಇದು ಮೂರನೇ ಬಾರಿ. ಅವರ ಮೊದಲ ಮತ್ತು ಅತ್ಯುತ್ತಮ ಬೌಲಿಂಗ್ ಪ್ರದರ್ಶನವೆಂದರೆ ಶ್ರೀಲಂಕಾ ವಿರುದ್ಧ 2016ರಲ್ಲಿ ಗಾಲೆಯಲ್ಲಿ ದಾಖಲಾಗಿತ್ತು 94 ಕ್ಕೆ 11 ವಿಕೆಟ್‌ಗಳು. ಇದಾದ ಬಳಿಕ 2019 ರಲ್ಲಿ ಶ್ರೀಲಂಕಾ ವಿರುದ್ಧ – ಕ್ಯಾನ್‌ಬೆರಾದಲ್ಲಿ 100 ಕ್ಕೆ 10 ವಿಕೆಟ್ ಕಿತ್ತಿದ್ದರು.
ಈ ಮೈಲಿಗಲ್ಲು ಪ್ರದರ್ಶನವು ಸ್ಟಾರ್ಕ್ ಅವರನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಗಣ್ಯರ ಪಟ್ಟಿಯಲ್ಲಿ ಸೇರಿಸಿತು. ಪರ್ತ್‌ನಲ್ಲಿ ಅವರ ಸಾಧನೆಯೊಂದಿಗೆ, ಅವರು WTC ನಲ್ಲಿ 200 ವಿಕೆಟ್‌ಗಳನ್ನು ತಲುಪಿದ ಮೂರನೇ ಬೌಲರ್ ಆದರು.
ಆಶಸ್‌ನಲ್ಲಿ ವೇಗಿಗಳಿಂದ 10 ವಿಕೆಟ್ ಸಾಧನೆ
ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ): 10 ವಿಕೆಟ್‌ಗಳು – ಪರ್ತ್, 2025
ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್): 11 ವಿಕೆಟ್‌ಗಳು – ಚೆಸ್ಟರ್-ಲೆ-ಸ್ಟ್ರೀಟ್, 2013
ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್): 10 ವಿಕೆಟ್‌ಗಳು – ನಾಟಿಂಗ್‌ಹ್ಯಾಮ್, 2013
ಕ್ರೇಗ್ ಮೆಕ್‌ಡರ್ಮಾಟ್ (ಆಸ್ಟ್ರೇಲಿಯಾ): 11 ವಿಕೆಟ್‌ಗಳು – ಪರ್ತ್, 1991
ಇದನ್ನೂ ಓದಿ : ಚಾ.ನಗರ | ಚಿನ್ನದ ವ್ಯಾಪಾರಿಯ ಕಾರು ಅಡ್ಡಗಟ್ಟಿ ದರೋಡೆ.. 1.2 ಕೆಜಿ ಚಿನ್ನ ಕಸಿದು ಪರಾರಿಯಾದ ಖದೀಮರು!



















