ಹುಬ್ಬಳ್ಳಿ : ಸಸಿಗಳಿಗೆ ನೀರುಣಿಸುವ ಪೈಪ್ ಗಳಿಗೆ ಕಿಡಿಗೇಡಿಗಳಿಂದ ಹಾನಿ ಮಾಡಿರುವ ಘಟನೆ ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ನಡೆದಿದೆ.
ಕಿಡಿಗೇಡಿಗಳ ಕೃತ್ಯಕ್ಕೆ ಪರಿಸರ ಪ್ರೇಮಿಗಳ ಆಕ್ರೋಶ ವ್ಯಕ್ತಪಡಿಸಿದ್ದು, ವಾಯು ವಿಹಾರಿಗಳ ತಾಣವಾಗಿರುವ ನೃಪತುಂಗ ಬೆಟ್ಟದಲ್ಲಿ ಸಸ್ಯಗಳ ಹಾಗೂ ಮರಗಳ ಸಂರಕ್ಷಣೆ ಮಾಡಲು ಹಾಕಿರುವ ಪೈಪ್ ಗಳಿಗೆ ಹಾನಿ ಮಾಡಿದ್ದಾರೆ.
ಪರಿಸರ ಪ್ರೇಮಿಗಳು ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದರು. ಹೊಸ ಪೈಪ್ ಲೈನ್ ಹಾಕಿದ ಮರುದಿನವೇ ಕಿಡಿಗೇಡಿಗಳು ಪೈಪ್ ಗೆ ಹಾನಿ ಮಾಡಿದ್ದಾರೆ. ಕೂಡಲೇ ಕಿಡಿಗೇಡಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ನೃಪತುಂಗ ಬೆಟ್ಟದ ವಾಕರ್ಸ್ ಸಂಘ ಆಗ್ರಹಿಸಿದೆ.