ಬಿಜೆಪಿ ನಾಯಕಿ, ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ ಕಿರುತೆರೆಗೆ ಮರಳಿದ್ದಾರೆ. ಜನಪ್ರಿಯತೆ ತಂದುಕೊಟ್ಟಿದ್ದ ಕ್ಯೂಂಕಿ ಸಾಸ್ ಭೀ ಕಭಿ ಬಹು ಥೀ ಸೀಸನ್ 2ರ ಧಾರಾವಾಹಿ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಧಾರಾವಾಹಿ ಶುರುವಾಗಿ ಈಗಾಗಲೇ 25 ವರ್ಷ ತುಂಬಿದ್ದು, ಈಗ 2ನೇ ಸೀಸನ್‌ಗೆ ಸಿದ್ಧತೆ ನಡೆಯುತ್ತಿದೆ. ಮಾಜಿ ಸಚಿವೆ ಸ್ಮೃತಿ ಇರಾನಿ ಅವರ, ಸೀರಿಯಲ್‌ನಲ್ಲಿನ ಪಾತ್ರ `ತುಳಸಿ’ ಫಸ್ಟ್ ಲುಕ್ ರಿಲೀಸ್ ಆಗಿದೆ.

ಫಸ್ಟ್ ಲುಕ್‌ನಲ್ಲಿ ಸ್ಮೃತಿ ಮೆರೂನ್ ಸೀರೆಯಲ್ಲಿ ಕಾಣಿಸಿಕೊಂಡಿದ್ದು, ದೊಡ್ಡದಾದ ಕೆಂಪು ಬಿಂದಿ, ಮಂಗಳಸೂತ್ರ ಹಾಗೂ ಆಭರಣಗಳಿಂದ ಅಲಂಕಾರಗೊಂಡಿದ್ದಾರೆ. 2014ರಲ್ಲಿಯೇ ಸ್ಮೃತಿ, ಸೀರಿಯಲ್‌ಗೆ ಮರಳಬೇಕಿತ್ತು. ಆದರೆ ಸಂಸತ್ತಿನಲ್ಲಿ ಕ್ಯಾಬಿನೆಟ್ ಸಚಿವೆಯಾಗಿ ಸೇವೆ ಸಲ್ಲಿಸಬೇಕಾಗಿದ್ದ ಕಾರಣದಿಂದ ವಾಪಸ್ಸಾಗಲು ಸಾಧ್ಯವಾಗಿರಲಿಲ್ಲ.