ವಿಶ್ವದ ಅತ್ಯಂತ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಗಳಲ್ಲಿ ಒಂದಾದ 2025ನೇ ಸಾಲಿನ ‘ಮಿಸ್ ಯೂನಿವರ್ಸ್‘(ಭುವನ ಸುಂದರಿ) ಸ್ಪರ್ಧೆಯ ಅಂತಿಮ ಘಟ್ಟ ಯಶಸ್ವಿಯಾಗಿ ಮುಕ್ತಾಯಗೊಂಡಿದೆ., ತೀವ್ರ ಕುತೂಹಲ ಕೆರಳಿಸಿದ್ದ ಈ ಸ್ಪರ್ಧೆಯಲ್ಲಿ ಮೆಕ್ಸಿಕೋ ದೇಶದ ಸುಂದರಿ ಫಾತಿಮಾ ಬಾಷ್ (Fatima Bosch) ಅವರು ವಿಜೇತರಾಗಿ ಹೊರಹೊಮ್ಮಿದ್ದು, 2025ರ ನೂತನ ಭುವನ ಸುಂದರಿ ಕಿರೀಟ ಧರಿಸಿದ್ದಾರೆ.
ವಿವಿಧ ದೇಶಗಳ ಸ್ಪರ್ಧಿಗಳ ನಡುವೆ ನಡೆದ ತೀವ್ರ ಪೈಪೋಟಿಯಲ್ಲಿ ಮೆಕ್ಸಿಕೋದ ಫಾತಿಮಾ ಬಾಷ್ ಅವರು ತಮ್ಮ ಸೌಂದರ್ಯ, ಆತ್ಮವಿಶ್ವಾಸ ಹಾಗೂ ಚಾಕಚಕ್ಯತೆಯಿಂದ ನಿರ್ಣಾಯಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅಂತಿಮ ಸುತ್ತಿನಲ್ಲಿ ನೀಡಿದ ಪ್ರದರ್ಶನ ಹಾಗೂ ಕೇಳಲಾದ ಪ್ರಶ್ನೆಗಳಿಗೆ ನೀಡಿದ ಉತ್ತರದ ಆಧಾರದ ಮೇಲೆ ಫಾತಿಮಾ ಅವರನ್ನು ವಿಜೇತರೆಂದು ಘೋಷಿಸಲಾಯಿತು. ಈ ಗೆಲುವಿನೊಂದಿಗೆ ಮೆಕ್ಸಿಕೋ ಮತ್ತೊಮ್ಮೆ ಜಾಗತಿಕ ಸೌಂದರ್ಯ ವೇದಿಕೆಯಲ್ಲಿ ತನ್ನ ಛಾಪು ಮೂಡಿಸಿದೆ.

ಇದೇ ವೇಳೆ, ಮಿಸ್ ಯೂನಿವರ್ಸ್ ಕಿರೀಟಕ್ಕಾಗಿ ಪ್ರಬಲ ಪೈಪೋಟಿ ನೀಡಿದ ಥೈಲ್ಯಾಂಡ್ ದೇಶದ ಸುಂದರಿ ಅಂತಿಮವಾಗಿ ಮೊದಲ ರನ್ನರ್ ಅಪ್ (First Runner-up) ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಅಂತಿಮ ಸುತ್ತಿನವರೆಗೂ ಪ್ರೇಕ್ಷಕರ ಗಮನ ಸೆಳೆದಿದ್ದ ಥೈಲ್ಯಾಂಡ್ ಸುಂದರಿ, ಫಾತಿಮಾ ಬಾಷ್ ಅವರಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದರು ಎಂಬುದು ಗಮನಾರ್ಹ.
ಮಿಸ್ ಯೂನಿವರ್ಸ್ ಸಂಸ್ಥೆಯು ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಹಾಗೂ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಈ ಸುದ್ದಿಯನ್ನು ಜಗತ್ತಿಗೆ ತಿಳಿಸಿದೆ. “ಮಿಸ್ ಯೂನಿವರ್ಸ್ ಮೆಕ್ಸಿಕೋ 2025, ಫಾತಿಮಾ ಬಾಷ್ ಅವರಿಗೆ ಅಭಿನಂದನೆಗಳು. ನಿಮ್ಮ ಈ ಪ್ರಯಾಣವು ಹೆಮ್ಮೆ, ಸಂತೋಷ ಮತ್ತು ಮೆಕ್ಸಿಕೋದ ಅನನ್ಯ ಹೊಳಪಿನಿಂದ ಕೂಡಿರಲಿ. ಹೊಳೆಯುತ್ತಿರಿ ರಾಣಿ (Go shine, reina)” ಎಂದು ಶೀರ್ಷಿಕೆ ನೀಡುವ ಮೂಲಕ ಸಂಸ್ಥೆಯು ನೂತನ ವಿಶ್ವಸುಂದರಿಗೆ ಶುಭ ಹಾರೈಸಿದೆ.
ಇದನ್ನೂ ಓದಿ: ಪತ್ನಿ ಜೊತೆ ತಾಜ್ಮಹಲ್ಗೆ ಭೇಟಿ ನೀಡಿದ ಡೊನಾಲ್ಡ್ ಟ್ರಂಪ್ ಪುತ್ರ!



















