ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋ ಪಿಂಕ್ ಲೈನ್ 2026ರ ಮೇ ತಿಂಗಳಲ್ಲಿ ಚಾಲನೆ ನೀಡುವ ನಿರೀಕ್ಷೆಯಿದೆ. ಕಲೇನಾ ಅಗ್ರಹಾರದಿಂದ ನಾಗವಾರದವರೆಗಿನ 21 ಕಿಮೀ ಉದ್ದದ ಈ ಮಾರ್ಗ ನಗರದ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಇದು ಎತ್ತರದ ಮತ್ತು ಭೂಗತ ಮಾರ್ಗಗಳನ್ನು ಹೊಂದಿದ್ದು, ಜಯದೇವ, ಎಂಜಿ ರಸ್ತೆ ಸೇರಿದಂತೆ ಹಲವು ಇಂಟರ್‌ಚೇಂಜ್ ನಿಲ್ದಾಣಗಳ ಮೂಲಕ ಪ್ರಯಾಣಿಕರಿಗೆ ಸುಲಭ ಸಂಚಾರ ಒದಗಿಸಲಿದೆ.
ಪಿಂಕ್ ಲೈನ್ ಕಲೇನಾ ಅಗ್ರಹಾರ ಮತ್ತು ತಾವರೆಕೆರೆ (ಸ್ವಾಗತ್ ಕ್ರಾಸ್ ರಸ್ತೆ) ನಡುವಿನ 2.5 ಕಿಮೀ ಎತ್ತರದ ಮತ್ತು 13.76 ಕಿಮೀ ಭೂಗತ ಮಾರ್ಗವನ್ನು ಒಳಗೊಂಡಿದೆ, ಇದು ನಗರದ ಅತ್ಯಂತ ಸಂಕೀರ್ಣ ಮೆಟ್ರೋ ಯೋಜನೆಗಳಲ್ಲಿ ಒಂದಾಗಿದೆ.
ಇನ್ನು ಭೂಗತ ಮಾರ್ಗಗಳು ಬೆಂಗಳೂರಿನ ಅತಿ ಉದ್ದದ ಸುರಂಗವಾಗಿದ್ದು, ಇದು ಡಿಸೆಂಬರ್ 2026ರ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ಪಿಂಕ್ ಲೈನ್ ಹಲವಾರು ಪ್ರಮುಖ ಕಾರಿಡಾರ್‌ಗಳೊಂದಿಗೆ ಸಂಪರ್ಕ ಸಾಧಿಸಲಿದ್ದು, ಪ್ರಯಾಣಿಕರಿಗೆ ಸುಲಭವಾಗಿ ಮಾರ್ಗಗಳನ್ನು ಬದಲಾಯಿಸಲು ಅನುವು ಮಾಡಿಕೊಡುತ್ತದೆ.
ಪ್ರಮುಖವಾಗಿ ಈ ಮಾರ್ಗದಲ್ಲಿ ಇಂಟರ್‌ಚೇಂಜ್ ನಿಲ್ದಾಣಗಳಲ್ಲಿ ಜಯದೇವ (ಯೆಲ್ಲೋ ಲೈನ್), ಎಂಜಿ ರಸ್ತೆ (ಪರ್ಪಲ್ ಲೈನ್), ಡೈರಿ ಸರ್ಕಲ್ (ರೆಡ್ ಲೈನ್), ನಾಗವಾರ (ಬ್ಲೂ ಲೈನ್), ಮತ್ತು ಜೆಪಿ ನಗರ 4 ನೇ ಹಂತ (ಆರೆಂಜ್ ಲೈನ್) ಸೇರಿವೆ.ಇದು ನಗರದ ಮಧ್ಯ ಮತ್ತು ದಕ್ಷಿಣ ಪ್ರದೇಶಗಳ ನಡುವಿನ ಪ್ರಯಾಣವನ್ನು ಗಮನಾರ್ಹವಾಗಿ ಸುಗಮಗೊಳಿಸಲಿದೆ.