ಹೊಸ ವರ್ಷದ ಸಂಭ್ರಮದ ಹೊಸ್ತಿಲಲ್ಲಿ ಕೇಂದ್ರ ಸರ್ಕಾರ, ಸಾರ್ವಜನಿಕ ಹಿತದೃಷ್ಟಿಯಿಂದ, ಪಡಿತರ ವಿತರಣೆ ವಿಚಾರದಲ್ಲಿ ಹೊಸ ಬದಲಾವಣೆಯೊಂದನ್ನು ಹೊರತರುತ್ತಿದೆ. ಮೇರಾ ರೇಷನ್ 2.0 ಎಂಬ ಆಪ್ ತರುವ ಮೂಲಕ ಕಾರ್ಡ ಪದ್ದತಿಗೆ ತಿಲಾಂಜಲಿ ಇಡುತ್ತಿದೆ.
ಆಹಾರ ಭದ್ರತಾ ಕಾಯ್ದೆಯಡಿ ಸರ್ಕಾರದ ವತಿಯಿಂದ ಕೊಡಲಾಗುವ ಪಡಿತರವನ್ನು ಇನ್ನು ಮುಂದೆ ಆಪ್ ಮೂಲಕ ನೋಂದಾಯಿಸಿ/ ಮುಂಗಡ ಕಾಯ್ದಿರಿಸಿ ಕೊಳ್ಳಲು ಅನುವು ಮಾಡಿಕೊಡುತ್ತಿದೆ. ಆ ಮೂಲಕ ಪಡಿತರ ಪುಸ್ತಕದ ಗೊಂದಲ ಕಡಿಮೆಯಾಗಲಿದೆ. ಆನ್ಲೈನ್ ಮೂಲಕ ಪಡಿತರ ಲೆಕ್ಕಾಚಾರ ಶುರುವಾಗುವುದರಿಂದ ಕಾಳ ದಂಧೆಗೂ ಹೊಡೆತ ಬೀಳಲಿದೆ ಎನ್ನಲಾಗುತ್ತಿದೆ.
ಸರಿಸುಮಾರು ಎಂಬತ್ತು ಕೋಟಿ ಫಲಾನುಭವಿಗಳ ಲೆಕ್ಕದೊಂದಿಗೆ ಇಪ್ಪತ್ತು ಕೋಟಿಗೂ ಅಧಿಕ ಸಂಖ್ಯೆಯ ಪಡಿತರ ಪುಸ್ತಕ ದೇಶದಲ್ಲಿದೆ. ಗೂಗಲ್ ಪ್ಲೇ ಸ್ಟೋರ್ ಮೂಲಕ ‘ಮೇರಾ ರೇಷನ್ 2.0’ ಆಪ್ ಡೌನ್ಲೋಡ್ ಮಾಡಿಕೊಂಡು ಆಧಾರ್ ಮತ್ತು ಮೊಬೈಲ್ ಸಂಖ್ಯೆ ನಮೂದಿಸಿಕೊಂಡು ಖಾತೆ ತೆರೆಯುವ ಮೂಲಕ ಪಡಿತರ ಪಡೆಯಬಹುದಾಗಿದೆ.