ಇರಾನ್ ನಲ್ಲಿನ ಗಣಿಯಲ್ಲಿ ಭಯಾನಕ ಸ್ಪೋಟ ಸಂಭವಿಸಿದ್ದು, 50 ಜನ ಬಲಿಯಾಗಿರುವ ಘಟನೆ ನಡೆದಿದೆ. ಅಲ್ಲದೇ, ಘಟನೆಯಲ್ಲಿ 17 ಜನ ಗಾಯಗೊಂಡಿದ್ದಾರೆ.
ಪೂರ್ವ ಇರಾನ್ ನ ತಬಾಸ್ ನಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಈ ದುರಂತ ಸಂಭವಿಸಿದೆ. ಮಿಥೇನ್ ಅನಿಲ ಸೋರಿಕೆಯಿಂದಾಗಿ ಈ ದುರಂತ ಸಂಭವಿಸಿದೆ ಎನ್ನಲಾಗುತ್ತಿದೆ.
ಈ ಕಲ್ಲಿದ್ದಲು ಗಣಿಯಲ್ಲಿ ಸುಮಾರು 70 ಜನರು ಕಾರ್ಯ ನಿರ್ವಹಿಸುತ್ತಿದ್ದರು ಎಂದು ತುಳಿದು ಬಂದಿದೆ. ಎಲ್ಲ ಕೆಲಸಗಾರರು ಕೆಲಸ ಮಾಡುತ್ತಿದ್ದಾಗಲೇ ಸ್ಫೋಟ ಸಂಭವಿಸಿದೆ. ಪರಿಣಾಮ ಇಷ್ಟೊಂದು ದೊಡ್ಡ ಅನಾಹುತ ಉಂಟಾಗಿದೆ. ಪರಿಣಾಮವಾಗಿ ಇರಾನ್ ನಲ್ಲಿ ಹೊಸದಾಗಿ ಆಯ್ಕೆಯಾದ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಗಣಿಯಲ್ಲಿ ಸಿಕ್ಕಿಬಿದ್ದವರನ್ನು ರಕ್ಷಿಸಲು ಹಾಗೂ ಅವರ ಕುಟುಂಬಗಳಿಗೆ ನೆರವು ನೀಡುವಂತೆ ಆದೇಶಿಸಿದ್ದಾರೆ.
ಇರಾನ್ ನಲ್ಲಿ 2013ರಲ್ಲಿ ನಡೆದ ಎರಡು ಪ್ರತ್ಯೇಕ ಗಣಿ ದುರಂತಗಳಲ್ಲಿ 11 ಜನ ಕಾರ್ಮಿಕರು ಕೂಡ ಸಾವನ್ನಪ್ಪಿದ್ದರು. 2009ರಲ್ಲಿ ಕೂಡ 20 ಜನ ಸಾವನ್ನಪ್ಪಿದ್ದರು. ಈಗ ಮತ್ತೆ ಇಂತಹ ಘಟನೆ ಮರುಕಳಿಸಿದೆ.