ಕೆನಡಾದ ಫೇಮಸ್ ಸಿಟಿ ಟೊರೊಂಟೋದಲ್ಲಿ ಸ್ಥಳೀಯರ ಮೇಲೆ ಗುಂಡಿನ ದಾಳಿಯಾಗಿದೆ. ಟೊರೊಂಟೊ ಸಿಟಿಯ ಲಾರೆನ್ಸ್ ಹೈಟ್ ಪ್ರದೇಶದಲ್ಲಿ ನಡೆದ ಸಾಮೂಹಿಕ ಶೂಟೌಟ್ ನಲ್ಲಿ ಓರ್ವ ಸಾವನ್ನಪ್ಪಿದ್ದು, ಗಾಯಗೊಂಡ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಫ್ಲೆಮಿಂಗ್‌ಟನ್ ರೋಡ್ ಮತ್ತು ಜಕಾರಿ ಕೋರ್ಟ್ ಸಮೀಪವೇ ಬಂದೂಕುಧಾಯೊಬ್ಬ ಗುಂಡಿನ ಮಳೆಗರೆದಿದ್ದಾನೆ. ಅಪರಿಚಿತ ಬಂದೂಕುಧಾರಿಯ ಸಾಮೂಹಿಕ ಶೂಟೌಟ್ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಗಾಯಾಳುಗಳನ್ನು ಆಸ್ಪತ್ರೆ ಸೇರಿಸಿದ್ದಾರೆ.
ಆದರೆ, ಹೆಚ್ಚಿನ ಪ್ರಾಣ ಹಾನಿ ಆಗಿಲ್ಲ ಅನ್ನೋದನ್ನ ಸ್ಥಳೀಯ ಪೊಲೀಸರು ದೃಢ ಪಡಿಸಿದ್ದಾರೆ. ತಲೆಮರೆಸಿಕೊಂಡಿರುವ ಬಂದೂಕುಧಾರಿಗಾಗಿ ಬೇಟೆ ಶುರು ಮಾಡಿದ್ದಾರೆ. ದುಷ್ಕರ್ಮಿಯು ಸಾರ್ನವಜನಿಕರನ್ನು ಗುರಿಯಾಗಿಸಿಕೊಂಡು ಶೂಟೌಟ್ ಮಾಡಿದ್ದು, ಹಿಂದಿನ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಗುಂಡಿನ ದಾಳಿ ಆಗುತ್ತಿದ್ದಂತೆ ಟೊರೊಂಟೊ ಮೇಯರ್ ಪ್ರತಿಕ್ರಿಯೆ ನೀಡಿದ್ದು, ಶೂಟೌಟ್‌ನಿಂದ ಘಾಸಿಗೆ ಒಳಗಾಗಿದ್ದೇನೆ ಅಂತಾ ನೋವಿನಿಂದ ಹೇಳಿದ್ದಾರೆ. ನನ್ನ ಕಚೇರಿ ಸಿಬ್ಬಂದಿ ನಿರಂತರವಾಗಿ ಪೊಲೀಸರ ಜೊತೆ ಸಂಪರ್ಕದಲ್ಲಿದ್ದಾರೆ. ಶೂಟೌಟ್ ಮಾಡಿದವನಿಗೆ ತೀವ್ರ ತಲಾಶ್ ನಡೆಸಲಾಗುತ್ತಿದೆ ಎಂದಿದ್ದಾರೆ.



















