ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಸಿನಿ ರಸಿಕರಿಗೆ ಹಾಗೂ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಮಾರ್ಟಿನ್’ (Martin) ಚಿತ್ರ ಅಕ್ಟೋಬರ್ 11ಕ್ಕೆ ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದು, ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.
ಈ ಕುರಿಚು ಚಿತ್ರ ತಂಡ ಸುದ್ದಿಗೋಷ್ಠಿ ನಡೆಸಿ, ಚಿತ್ರ ಬಿಡುಗಡೆ ಮಾಡುವ ದಿನಾಂಕ ಘೋಷಿಸಿದೆ. ಮಾರ್ಟಿನ್ ಚಿತ್ರವು ಧ್ರುವ ಸರ್ಜಾ ಅಭಿನಯದ 5ನೇ ಚಿತ್ರ. ಎ.ಪಿ.ಅರ್ಜುನ್ ನಿರ್ದೇಶನದ ಮಾರ್ಟಿನ್ 5 ಭಾಷೆಗಳಲ್ಲಿ ತೆರೆಗೆ ಅಪ್ಪಳಿಸಲಿದೆ.
ಇದು 2024 ರ ಹೈವೋಲ್ಟೇಜ್ ಸಿನಿಮಾ ಇದಾಗಲಿದೆ. ಪೊಗರು ಸಿನಿಮಾದ ನಂತರ 3 ವರ್ಷಗಳ ನಂತರ ಬೆಳ್ಳಿತೆರೆ ಮೇಲೆ ಧ್ರುವ ಸರ್ಜಾ ಅಭಿನಯದ ಮತ್ತೊಂದು ಚಿತ್ರ ಬಿಡುಗಡೆಯಾಗುತ್ತಿದೆ.