ಪ್ಯಾರಿಸ್ ಒಲಿಂಪಿಕ್ಸ್ ನ ಕೆಲವು ಪಂದ್ಯಗಳಲ್ಲಿ ಭಾರತೀಯ ಆಟಗಾರರು ಸ್ವಲ್ಪದರಲ್ಲಿಯೇ ಪದಕ ಗೆಲ್ಲುವ ಅವಕಾಶವನ್ನು ಕೈ ಚೆಲ್ಲಿದ್ದಾರೆ.
ಭಾರತದ ಶೂಟರ್ ಮನು ಭಾಕರ್ ಮಾತ್ರ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇಂದು ಅವರು ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.
25 ಮೀ ಪಿಸ್ತೂಲ್ ಮಹಿಳೆಯರ ಅರ್ಹತಾ ಸುತ್ತಿನಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಮನು ಅಂತಿಮ ಹಣಾಹಣಿಯಲ್ಲಿ 7 ಜನರ ವಿರುದ್ಧ ಸ್ಪರ್ಧಿಸಲಿದ್ದಾರೆ. ಅರ್ಹತಾ ಸುತ್ತಿನಲ್ಲಿ ಮನು ಭಾಕರ್ 290 ಅಂಕಗಳನ್ನು ಕಲೆಹಾಕಿದರೆ, ಮೊದಲ ಸ್ಥಾನ ಪಡೆದ ಹಂಗೇರಿಯ ವೆರೋನಿಕಾ ಮೇಜರ್ 292 ಪಾಯಿಂಟ್ಸ್ ಗಳಿಸಿದ್ದರು. ಇಲ್ಲಿ ಮನು ಹಾಗೂ ವೆರೋನಿಕಾ ನಡುವಿಣ ವ್ಯತ್ಯಸ ಕೇವಲ 2 ಅಂಕ ಮಾತ್ರ ಆಗಿತ್ತು. ಹೀಗಾಗಿಯೇ ಫೈನಲ್ ರೌಂಡ್ನಲ್ಲಿ ಮನು ಭಾಕರ್ ಕಡೆಯಿಂದ ಚಿನ್ನದ ಪದಕ ನಿರೀಕ್ಷಿಸಬಹುದಾಗಿದೆ.
ಶೂಟಿಂಗ್ ಅಲ್ಲದೆ, ಗಾಲ್ಫ್, ಬಿಲ್ಲುಗಾರಿಕೆ ಸೇರಿದಂತೆ ಇತರೆ ಸ್ಪರ್ಧೆಗಳಲ್ಲೂ ಭಾರತೀಯ ಕ್ರೀಡಾಪಟುಗಳು ಕಣಕಿಳಿಯಲಿದ್ದಾರೆ.
ಶನಿವಾರ (ಆ.3) ಭಾರತೀಯ ಸ್ಪರ್ಧಿಗಳು ಕಣಕ್ಕಿಳಿಯಲಿರುವ ಸ್ಪರ್ಧೆಗಳು
• 12:30 PM IST – ಶೂಟಿಂಗ್ – ಸ್ಕೀಟ್ ಮಹಿಳೆಯರ ಅರ್ಹತಾ ಸುತ್ತು- ರೈಜಾ ಧಿಲ್ಲೋನ್, ಮಹೇಶ್ವರಿ ಚೌಹಾಣ್
• 12:30 PM IST – ಗಾಲ್ಫ್ – ಪುರುಷರ ವೈಯಕ್ತಿಕ ಸ್ಟ್ರೋಕ್ ಪ್ಲೇ ಸುತ್ತು 3 – ಶುಭಂಕರ್ ಶರ್ಮಾ, ಗಗನ್ಜೀತ್ ಭುಲ್ಲರ್
• 1:00 PM IST – ಶೂಟಿಂಗ್ – 25 ಮೀ ಪಿಸ್ತೂಲ್ ಮಹಿಳೆಯರ ಫೈನಲ್ – ಮನು ಭಾಕರ್
• 1:52 PM IST – ಬಿಲ್ಲುಗಾರಿಕೆ – ಮಹಿಳೆಯರ ವೈಯಕ್ತಿಕ 1/8 ಎಲಿಮಿನೇಷನ್ ರೌಂಡ್ – ದೀಪಿಕಾ ಕುಮಾರಿ vs ಮಿಚೆಲ್ ಕ್ರೊಪ್ಪೆನ್ (ಜರ್ಮನಿ)
• 2:05 PM IST – ಬಿಲ್ಲುಗಾರಿಕೆ – ಮಹಿಳೆಯರ ವೈಯಕ್ತಿಕ 1/8 ಎಲಿಮಿನೇಷನ್ ರೌಂಡ್ – ಭಜನ್ ಕೌರ್ vs ದಿಯಾನಂದ ಚೋರುನಿಸಾ (ಇಂಡೋನೇಷ್ಯಾ)
• 3:45 PM IST – ನೌಕಾಯಾನ – ಪುರುಷರ ಡಿಂಗಿ ರೇಸ್ 5 – ವಿಷ್ಣು ಸರವಣನ್
• ನೌಕಾಯಾನ – ರೇಸ್ 5 ನಂತರ – ಪುರುಷರ ಡಿಂಗಿ ರೇಸ್ 6 – ವಿಷ್ಣು ಸರವಣನ್
• 5:55 PM IST – ನೌಕಾಯಾನ – ಮಹಿಳೆಯರ ಡಿಂಗಿ ರೇಸ್ 5 – ನೇತ್ರಾ ಕುಮನನ್
• ನೌಕಾಯಾನ – ರೇಸ್ 5 ನಂತರ – ಮಹಿಳೆಯರ ಡಿಂಗಿ ರೇಸ್ 6 – ನೇತ್ರಾ ಕುಮನನ್
• 12:02 AM IST (ಆಗಸ್ಟ್ 4) – ಬಾಕ್ಸಿಂಗ್ – ಪುರುಷರ 71 ಕೆಜಿ ಕ್ವಾರ್ಟರ್ಫೈನಲ್ – ನಿಶಾಂತ್ ದೇವ್ ವಸ ಮಾರ್ಕೊ ಅಲೋನ್ಸೊ ವರ್ಡೆ ಅಲ್ವಾರೆಜ್ (ಮೆಕ್ಸಿಕೊ) ವಿರುದ್ಧ ಸೆಣಸಾಟ ನಡೆಸಲಿದ್ದಾರೆ.