ಮಂಗಳೂರು : ಮಂಗಳೂರು ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ಬೆಳ್ಳಂಬೆಳಗ್ಗೆ ಬೆಂಕಿ ಅವಘಡ ಸಂಭವಿಸಿದೆ.
ಅಮೆಝಾನ್ ಸುಗಂಧ ದ್ರವ್ಯ ತಯಾರಕ ಕಂಪೆನಿಯು ಬೆಂಕಿಗೆ ಆಹುತಿ ಆಗಿದ್ದು, ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯವಾಗಿಲ್ಲಎಂದು ತಿಳಿದು ಬಂದಿದೆ.
ಮುಂಜಾನೆ 5 ಗಂಟೆ ಸುಮಾರಿಗೆ ಸುಗಂಧ ದ್ರವ್ಯಕ್ಕೆ ಬೆಂಕಿ ತಗುಲಿ ಘಟಕ ಧಗಧಗನೆ ಉರಿದಿದೆ. ಬೆಂಕಿಯನ್ನು ನಂದಿಸಲು ಎಂಸಿಎಫ್, ಎನ್ಎಂಪಿಎ, ಕದ್ರಿ ಅಗ್ನಿಶಾಮಕದಳ ಮುಂದಾಗಿದ್ದು, ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಗ್ನಿ ಅವಘಡದ ಕಾರಣವನ್ನು ಪತ್ತೆಹಚ್ಚಲು ತನಿಖೆ ಆರಂಭವಾಗಿದೆ.