ಮಂಗಳೂರು : ಮಹಿಳೆಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಪ್ರಕರಣಕ್ಕೆ ಸಂಭಂದಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿ, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಪೊಲೀಸರಿಂದ ತಿಳಿದುಬಂದ ವಿವರಗಳ ಪ್ರಕಾರ, ಘಟನೆ ನವೆಂಬರ್ 13, 2025ರ ರಾತ್ರಿ ನಡೆದಿದೆ. ಫಿರ್ಯಾದುದಾರರಾದ ಮಹಿಳೆ ತಮ್ಮ ಗಂಡ ಮತ್ತು ಮಕ್ಕಳೊಂದಿಗೆ ಕಡಬದಲ್ಲಿ ವಾಸಿಸುತ್ತಿದ್ದು, ಘಟನೆ ವೇಳೆ ಅವರು ಮನೆಯ ಹೊರಭಾಗದಲ್ಲಿರುವ ಕೊಟ್ಟಿಗೆಯಲ್ಲಿ ಮಲಗಿಕೊಂಡಿದ್ದರು. ಅದೇ ವೇಳೆ, ಅಪ್ರತೀಕ್ಷಿತವಾಗಿ ಒಬ್ಬ ವ್ಯಕ್ತಿ ಬಂದು ಮಹಿಳೆಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ.
ಮಹಿಳೆ ಸಹಾಯಕ್ಕಾಗಿ ಕೂಗಿ ಬೊಬ್ಬೆ ಹೊಡೆದಿದ್ದು, ಮನೆಯೊಳಗಿದ್ದ ಗಂಡ ಹಾಗೂ ಮಕ್ಕಳು ಓಡಿ ಬಂದಿದ್ದಾರೆ. ಈ ವೇಳೆಯಲ್ಲಿ ಆರೋಪಿಯೂ ಸ್ಥಳೀಯ ನಿವಾಸಿ ಉಮೇಶ್ ಗೌಡ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಹಿಡಿಯಲು ಪ್ರಯತ್ನಿಸಿದಾಗ, ಆತ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಬಳಿಕ ತನಿಖೆ ವೇಳೆ ದೊರೆತ ಉಮೇಶ್ ಗೌಡನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಿಚಾರಣೆ ನಂತರ ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಇದನ್ನೂ ಓದಿ : ಹುಲಿ ದಾಳಿಗೆ ಹಸು ಬಲಿ ; ಅದೃಷ್ಟವಶಾತ್ ರೈತ ಪಾರು



















