ಮಂಗಳೂರು : ನಮ್ಮಲ್ಲಿ ಉತ್ತಮ ಸೌಲಭ್ಯಗಳಿವೆ ಪಿಲಿಕುಳದ ಸೌಟ್ಸ್ ಮತ್ತು ಗೈಡ್ಸ್ ಭವನವು ವ್ಯವಸ್ಥಿತ ವಾಗಿದ್ದು ಎನ್‌ಸಿಸಿ ವಿದ್ಯಾರ್ಥಿಗಳಿಗೆ ಸದುಪಯೋಗ ಪಡಿಸಿಕೊಳ್ಳಲು ಉತ್ತಮ ಅವಕಾಶ ಎಂದು ಎನ್‌ಸಿಸಿ ಕರ್ನಾಟಕ ವಿಭಾಗದ ಮಹಾನಿರ್ದೇಶಕ ಜಿ ಅರುಣ್ ಕುಮಾರ್ ಹೇಳಿದ್ಧಾರೆ.
ಪಿಲಿಕುಳದ ಸೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ನಡೆದ ಎನ್‌ಸಿಸಿ ವಾರ್ಷಿಕ ತರಬೇತಿ ಶಿಬಿರದಲ್ಲಿ ಎನ್‌ಸಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.
ಎನ್‌ಸಿಸಿ ಕರ್ನಾಟಕ ವಿಭಾಗದಲ್ಲಿ ತಂಡವನ್ನು ಬಲಪಡಿಸುವಲ್ಲಿ ನಾವು ಶ್ರಮಿಸಬೇಕು. ಕರ್ನಾಟಕ ಎನ್‌ಸಿಸಿ ನೌಕಾದಳವು ಉತ್ತಮ ಉಪಕರಣಗಳನ್ನು ಹೊಂದಿದೆ. ತರಬೇತಿಗೆ ಬೇಕಾದ ಹಲವು ಉಪಕರಣಗಳು ತರಬೇತಿ ಪಡೆಯಲು ಸಹಕರಿಯಾಗಿದೆ. ಇದನ್ನು ಎನ್‌ಸಿಸಿ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ತಂಡವನ್ನು ಶಕ್ತಿಯುತ ತಂಡವಾಗಿ ನಿರ್ಮಿಸಬೇಕು. ಪಿಲಿಕುಳದ ಸೌಟ್ಸ್ ಮತ್ತು ಗೈಡ್ಸ್ ಭವನವು ಅತ್ಯಾಧುನಿಕ ರೀತಿಯಲ್ಲಿ ನಿರ್ಮಾಣವಾಗಿದೆ. ಇದು ಎನ್‌ಸಿಸಿ ವಿದ್ಯಾರ್ಥಿಗಳಿಗೆ ಉತ್ತಮ ಕೊಡುಗೆ ಎಂದಿದ್ದಾರೆ.
ಎನ್‌ಸಿಸಿ ಗ್ರೂಪ್ ಕಮಾಂಡ್ ಕರ್ನಲ್ ವಿರಾಜ್ ಕಾಮತ್ ಮಾತನಾಡಿ ಕರ್ಣಾಟಕ ಎನ್‌ಸಿಸಿ ತಂಡ ರಚನೆಗಾಗಿ 36 ಕೆಡೆಟ್‌ಗಳನ್ನು ಈ ಶಿಬಿರದಲ್ಲಿ ಆಯ್ಕೆ ಮಾಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು ಹೇಳಿದ್ದಾರೆ.