ಮಂಗಳೂರಿನಲ್ಲಿ ಸಾಲುಸಾಲು ಗಲಾಟೆಗಳು, ಅಹಿತಕರ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಕಮಿಷನರ್ ರನ್ನು ಎತ್ತಂಗಡಿ ಮಾಡಲಾಗಿದೆ.
ಕಮಿಷನರ್ ಆಗಿದ್ದ ಅನೂಪ್ ಅಗರ್ವಾಲ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅನೂಪ್ ಅಗರ್ವಾಲ್ ಅವರನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಅಲ್ಲದೇ, ನೂತನ ಕಮಿಷನರ್ ಆಗಿ ಸುಧೀರ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.
ಅಲ್ಲದೇ, ಭೂಷಣ್ ಗುಲಬ್ ರಾವ್ ಅವರನ್ನು ಬೆಳಗಾವಿ ಡಿಸಿಪಿಯನ್ನಾಗಿ, ಅರುಣ್ ಕೆ ಅವರನ್ನು ದಕ್ಷಿಣ ಕನ್ನಡ ಎಸ್ಪಿಯನ್ನಾಗಿ, ಹರಿರಾಮ್ ಶಂಕರ್ ರನ್ನು ಉಡುಪಿ ಎಸ್ಪಿಯನ್ನಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.


















