ಮಂಡ್ಯ : ಬಸ್ ರಿವರ್ಸ್ ತೆಗೆಯುವಾಗ ಊಟ ಮಾಡುತ್ತಾ ಕುಳಿತಿದ್ದ ಇರ್ವರು ಮಹಿಳೆಯರಿಗೆ ಡಿಕ್ಕಿ ಹೊಡೆದು ಒರ್ವ ಮಹಿಳೆ ಸಾವನ್ನಪ್ಪಿದ್ದು, ಮತ್ತೊಬ್ಬ ಸ್ತ್ರೀಗೆ ಗಂಭೀರ ಗಾಯಗಳಾಗಿವೆ.
ಈ ಘಟನೆ ಮಂಡ್ಯದ ಕೆಆರ್‌ಎಸ್‌ನಲ್ಲಿ ನಡೆದಿದೆ. ಕೇರಳ ಮೂಲದ ಕೌಸಲ್ಯ ಮೃತ ಮಹಿಳೆ ಎನ್ನಲಾಗಿದೆ.
ಮಂಡ್ಯದ ಕೆಆರ್‌ಎಸ್ ಗೆ ಪ್ರವಾಸಕ್ಕೆ ಬಂದಿದ್ದ ಕೌಸಲ್ಯ ಹಾಗೂ ನಾರಾಯಣಿ ಎಂಬುವವರು ಊಟ ಮಾಡುತ್ತಿದ್ದ ವೇಳೆ ಮಕ್ಕಳನ್ನು ಪ್ರವಾಸಕ್ಕೆ ಕರೆತಂದಿದ್ದ ಬಸ್ ಚಾಲಕನು ಗಮನಿಸದೆ ಬಸ್ ರಿವರ್ಸ್ ತೆಗೆದಿದ್ದಾನೆ. ಬಸ್ ಗುದ್ದಿದ ಪರಿಣಾಮ ಕೌಸಲ್ಯ ಸಾವನ್ನಪ್ಪಿದ್ದು, ನಾರಾಯಣಿಗೆ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದೀಗ ಕೆಆರ್‌ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ನಾಳೆ ಆಂಧ್ರ, ಒಡಿಶಾಗೆ ಅಪ್ಪಳಿಸಲಿದೆ ‘ಮೊಂಥಾ’ ಚಂಡಮಾರುತ | 9 ಜಿಲ್ಲೆಗೆ ರೆಡ್ ಅಲರ್ಟ್.. IMD ಮುನ್ನೆಚ್ಚರಿಕೆ ಏನು?



















