ಮಂಡ್ಯ :ಮಂಡ್ಯ ಜಿಲ್ಲೆಯಲ್ಲಿ ಬಿಗಿ ಬಂದೋಬಸ್ತ್‌ನೊಂದಿಗೆ ಹೊಸ ವರ್ಷಾಚರಣೆಗೆ ಸಜ್ಜಾಗಿದೆ. ಕಾವೇರಿ ನದಿ ದಂಡೆಯ ಪ್ರದೇಶಗಳಲ್ಲಿ ನ್ಯೂಯಿಯರ್ ಸೆಲೆಬ್ರೆಷನ್‌ಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ.
ವರ್ಷಾಚರಣೆಯ ಹೆಸರಲ್ಲಿ ಡ್ರಗ್ಸ್ ಸೇವನೆ ಮಾಡುವವರ ಮೇಲೆ ಖಾಕಿ ನಿಗಾವಹಿಸಿದ್ದು, ಅನುಮತಿ ಇಲ್ಲದೆ ಹೊಸ ವರ್ಷಾಚರಣೆ ಕಾರ್ಯಕ್ರಮ ಆಯೋಜನೆ ಹಾಗು ಅಕ್ರಮ ಮದ್ಯ ಮಾರಾಟ ನಡೆಸುವವರಿಗೆ ಎಸ್ ಪಿ ಮಲ್ಲಿಕಾರ್ಜುನ ಕಟ್ಟೆಚ್ಚರಿಕೆ ನೀಡಿದ್ದಾರೆ. ವರ್ಷಾಚರಣೆ ಪಾರ್ಟಿ ಆಯೋಗಕರಿಗೆ ಕಾರ್ಯಕ್ರಮದ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿರುವ ಶ್ರೀರಂಗಪಟ್ಟಣ,ಪಾಂಡವಪುರ, ಮಳವಳ್ಳಿ ತಾಲೂಕಿನ ಕಾವೇರಿ ನದಿ ದಂಡೆಯ ಪ್ರವಾಸಿ ತಾಣಗಳಿಗೆ ಸಾರ್ವಜನಿಕರು ಹಾಗು ಪ್ರವಾಸಿಗರಿಗೆ ನಿಷೇಧಾಜ್ಞೆ ಹೊರಡಿಸಲಾಗಿದೆ.
ಇನ್ನೂಕೆಆರ್‌ಎಸ್ ಡ್ಯಾಂ ಹಾಗೂ ಕಾವೇರಿ ಹಿನ್ನೀರಿನ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಕಟ್ಟೆಚ್ಚರವಹಿಸಲಾಗಿದೆ. ವರ್ಷಾಚರಣೆ ನೆಪದಲ್ಲಿ ಕುಡಿದು ವಾಹನ ಚಲಾಯಿಸುವರಿಗೆ ದಂಡ ಬೀಳೋದು ಪಕ್ಕ. ಹೊಸ ವರ್ಷಾಚರಣೆ ಹಿನ್ನಲೆ ಪ್ರವಾಸಿ ತಾಣಗಳ ಬಳಿ ಭದ್ರತೆಗೆ ಹೋಂ ಗಾರ್ಡ್ ಮತ್ತು ಪೊಲೀಸರ ನಿಯೋಜನೆ ಮಾಡಲಾಗಿದೆ. ಅವಘಡ ಮತ್ತು ದುರಂತಗಳ ಕಡಿವಾಣಕ್ಕೆ ಪೊಲೀಸ್ ಇಲಾಖೆ ರೆಡಿಯಾಗಿದೆ.
ಇದನ್ನೂ ಓದಿ : 1 ಗಂಟೆಯೊಳಗೆ ಬಾರ್, ಪಬ್ ಕ್ಲೋಸ್ ಮಾಡ್ಬೇಕು, ನಿಯಮ ಮೀರಿದರೆ ಕೇಸ್ ಗ್ಯಾರಂಟಿ | ಜಿ. ಪರಮೇಶ್ವರ್



















