ಕುಂದಾಪುರ:ಮಂಡಾಡಿ ಹೋರ್ವರಮನೆಯ 17ನೇ ವರ್ಷದ ಕಂಬಳೋತ್ಸವ ಕಾರ್ಯಕ್ರಮ ಭರ್ಜರಿಯಾಗಿ ನಡೆಯಿತು.
ಸಾಂಪ್ರದಾಯಿಕ ಕಂಬಳೋತ್ಸವದಲ್ಲಿ ಕುಂದಾಪುರ, ಬೈಂದೂರು, ಭಟ್ಕಳ, ಉಡುಪಿ, ಕಾರ್ಕಳ ಭಾಗದ ಸುಮಾರು 50ಕ್ಕೂ ಅಧಿಕ ಜೊತೆ ಕೋಣಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಕನೆಹಲಗೆ ವಿಭಾಗ, ಹಗ್ಗ ಹಿರಿಯ ವಿಭಾಗ, ಹಗ್ಗ ಕಿರಿಯ ವಿಭಾಗ, ಸಬ್ ಜ್ಯೂನಿಯರ್ ವಿಭಾಗ, ಕೆಸರು ಗದ್ದೆ ಓಟ ನಡೆಯಿತು. ವಿಜೇತ ಕೋಣಗಳ ಮಾಲೀಕರಿಗೆ ಹಾಗೂ ಓಟ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪಧಾಳುಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಸೌಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ಅಧ್ಯಕ್ಷ ಮಂಜಯ್ಯ ಶೆಟ್ಟಿ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಮಂಡಾಡಿ ಮನೆತನದ ದೈವ ದೇವತೆಗಳ ಆರಾಧನೆಯೊಂದಿಗೆ ಮಂಡಾಡಿ ಹೋರ್ವರ ಕಂಬಳೋತ್ಸವ ಕಾರ್ಯಕ್ರಮ ಕಳೆದ ಹದಿನೇಳು ವರ್ಷಗಳಿಂದ ಸಾಂಪ್ರದಾಯಿಕವಾಗಿ ನಡೆಯುತ್ತಿದೆ.

ಬಾರ್ಕೂರು ಶಾಂತರಾಮ ಶೆಟ್ಟಿ, ಲಕ್ಷ್ಮಣ ಶೆಟ್ಟಿ, ಆದರ್ಶ್ ಶೆಟ್ಟಿ, ಸಮಿತಿ ಗೌರವಾಧ್ಯಕ್ಷ ಡಾ. ರಂಜನ್ ಕುಮಾರ್ ಶೆಟ್ಟಿ, ಜಯರಾಮ ಶೆಟ್ಟಿ, ಮಹೇಶ್ ಹೆಗಡೆ, ಮಂಡಾಡಿ ಹೋರ್ವರಮನೆ ಬಾಬಣ್ಣ ಶೆಟ್ಟಿ, ಸಂತೋಷ ಶೆಟ್ಟಿ, ಸಂದರ್ಶ ಶೆಟ್ಟಿ, ಸನತ್ ಶೆಟ್ಟಿ, ಹರ್ಷಿತ್ ಶೆಟ್ಟಿ, ಶಿಕ್ಷಕ ಉದಯ ಕುಮಾರ್ ಶೆಟ್ಟಿ, ಕಿಶೋರ್ ಬೈಂದೂರು, ಅಭಿ ಪಾಂಡೇಶ್ವರ ಸೇರಿದಂತೆ ಹಲವರು ಇದ್ದರು.