ಬೆಂಗಳೂರು: ಮಹಿಳೆಯರನ್ನು ಚುಡಾಯಿಸಿ, ಫೋಟೋ ತೆಗೆಯುತ್ತಿದ್ದ ಬೀದಿ ಕಾಮುಕನ್ನು ಸ್ಥಳೀಯರು ಹಿಡಿದು, ಪಾಠ ಕಲಿಸಿರುವ ಘಟನೆಯೊಂದು ನಡೆದಿದೆ.
ನಗರದ ಟೌನ್ ಹಾಲ್ ಮುಂಭಾಗದ ರಸ್ತೆಯಲ್ಲೇ ಮಹಿಳೆಯರಿಗೆ ಕಾಮುಕ ಟಾರ್ಚರ್ ನೀಡುತ್ತಿದ್ದ ಎನ್ನಲಾಗಿದೆ. ಶನಿವಾರ ಮಧ್ಯಾಹ್ನ 3.30ರ ವೇಳೆಗೆ ಈ ಘಟನೆ ನಡೆದಿದೆ. ಕಾಮುಕ, ಪ್ರತಿದಿನ ಮಹಿಳೆಯರನ್ನು ಚುಡಾಯಿಸಿ, ಫೋಟೋ ತೆಗೆಯುತ್ತಿದ್ದ ಎನ್ನಲಾಗಿದೆ. ಹೀಗೆ ಫೋಟೋ ತೆಗೆಯುತ್ತಿದ್ದ ವೇಳೆಯೇ ಸಾರ್ವಜನಿಕರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.
ಮಹಿಳೆಯ ಖಾಸಗಿ ಫೋಟೋ ತೆಗೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲಾಕ್ ಆಗಿದ್ದಾನೆ. ಆಗ ಮೊಬೈಲ್ ಪರಿಶೀಲನೆ ನಡೆಸಿದಾಗ ನೂರಾರು ಅಶ್ಲೀಲ ಫೋಟೋ ಗಳು ಇರುವುದು ಬೆಳಕಿಗೆ ಬಂದಿದೆ. ಟೌನ್ ಹಾಲ್ ನಿಂದ ಕೆ. ಆರ್ ಮಾರ್ಕೆಟ್ ಗೆ ಹೋಗುವ ರಸ್ತೆಯ ಅಂಡರ್ ಪಾಸ್ ಸಬ್ ವೇ ನಲ್ಲಿ ಕೂತು ಹುಡುಗಿಯರ ಫೋಟೋ ತೆಗೆಯುತ್ತಿದ್ದ ಎನ್ನಲಾಗಿದೆ. ಮಹಿಳೆಯರ ಹಿಂಬದಿಯ ಫೋಟೋ ತೆಗೆದು ವಿಕೃತಿ ಮೆರೆಯುತ್ತಿದ್ದ ಎನ್ನಲಾಗಿದೆ.