ತುಮಕೂರು : ಕೋತಿ ಮಾಡಿದ ತಪ್ಪಿಗೆ ಭೀಕರ ಹೆಜ್ಜೇನು ದಾಳಿಯಿಂದಾಗಿ ವ್ಯಕ್ತಿಯೊಬ್ಬರು ಜೀವ ಕಳೆದುಕೊಂಡಿರುವ ಘಟನೆ ತುಮಕೂರಿನ ಮಾರುತಿ ನಗರದಲ್ಲಿ ನಡೆದಿದೆ. ನೃಪತುಂಗ ಬಡಾವಣೆಯ ನಿವಾಸಿ ವಿಜಯ್ ಪ್ರಕಾಶ್( 65) ಮೃತ ವ್ಯಕ್ತಿ. ಸುಜುಕಿ ಶೋರೂಂ ಸೂಪರ್ ವೈಸರ್ ಕೆಲಸ ಮಾಡುತ್ತಿದ್ದ ವಿಜಯ್ ಪ್ರಕಾಶ್, ಕೆಲಸ ಮುಗಿಸಿ ಸಂಜೆ ಮನೆಗೆ ಬರುವಾಗ ಈ ದುರ್ಘಟನೆ ನಡೆದಿದೆ.
ಕೋತಿಯೊಂದು ಮಾಡಿದ್ದ ಕೀಟಲೆಯಿಂದ ಮಾರುತಿ ನಗರ ಪಿಎನ್ ಟಿ ಕ್ವಾಟ್ರಸ್ ಬಳಿ ಮರದಲ್ಲಿದ್ದ ಹೆಜ್ಜೇನು ಸ್ಥಳದಲ್ಲಿದ್ದ ನಾಲ್ಕೈದು ಜನರ ಮೇಲೂ ದಾಳಿ ಮಾಡಿದೆ.ಅದರಲ್ಲಿ ಓರ್ವನಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಕಿತ್ಸೆ ನೀಡಲಾಗುತ್ತಿದೆ.
ಈ ವೇಳೆ ಬೈಕ್‌ನಲ್ಲಿ ತೆರಳುತ್ತಿದ್ದಮೃತ ವಿಜಯ್ ಪ್ರಕಾಶ್ ಮೇಲೂ ದಾಳಿ ನಡೆದಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಶರ್ಟ್ ಬಿಚ್ಚಿ ಹೆಜ್ಜೆನು ಒಡಿಸಲು ಪ್ರಯತ್ತ ಮಾಡಿದ್ದಾರೆ. ಆದರೆ ನೂರಾರು ಜೇನು ನೊಣಗಳು ಏಕಕಾಲದಲ್ಲಿ ದಾಳಿಯಿಂದ ಮುಖ ಸೇರಿದಂತೆ ದೇಹದ ಹಲವು ಭಾಗದ ಕಚ್ಚಿವೆ ಹಾಗೂ ಮುಖದ ತುಂಬಾ ಮುಳ್ಳುಗಳು ಚುಚ್ಚಿಕೊಂಡಿದ್ದವು. ಇದರಿಂದ ಚಿಕಿತ್ಸೆ ಫಲಕಾರಿಯಾಗದೆ ವಿಜಯ್ ಪ್ರಕಾಶ್ ಮೃತಪಟ್ಟಿದ್ದಾರೆ.
ಕೋತಿ ಮಾಡಿದ ಕೀಟಲೆಗೆ ವಿಜಯ್ ಪ್ರಕಾಶ್ ಜೀವ ತೆತ್ತಿದ್ದು, ತಂದೆ ಸಾವಿನಿಂದ ಮಗಳು ಕಣ್ಣೀರಿಡುತ್ತಿದ್ದಾರೆ. ತಂದೆಗೆ ಬಂದ ಪರಿಸ್ಥಿತಿ ಮತ್ತೆ ಯಾರಿಗೂ ಬರದಂತೆ ಕ್ರಮ ವಹಿಸಲು ಮನವಿ ಮಾಡಿದ್ದಾರೆ. ಈ ಘಟನಾ ಸಂಬಂಧ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ : ಶಿವಮೊಗ್ಗದಲ್ಲಿ ಕಾರು-ಆ್ಯಂಬ್ಯುಲೆನ್ಸ್ ನಡುವೆ ಡೆಡ್ಲಿ ಆಕ್ಸಿಡೆಂಟ್.. ಸಿಸಿಟಿವಿಯಲ್ಲಿ ದೃಶ್ಯ ಸೆರೆ!



















