ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಕೊಲೆಯೊಂದು ನಡೆದಿದೆ. ಅಪ್ಪನಿಗೆ ಹಲ್ಲೆ ಮಾಡಿದ್ದಾರೆ ಎನ್ನುವ ಕೋಪಕ್ಕೆ ಮಗ, ವ್ಯಕ್ತಿಯೋರ್ವನನ್ನು ಮನಸೊ ಇಚ್ಚೆ ತಳಿಸಿರುವ ಘಟನೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಾರಾಯಣಸ್ವಾಮಿ 55 ವರ್ಷ ಕೊಲೆಯಾದ ವ್ಯಕ್ತಿ. ಕಳೆದ ನ.11 ರಂದು ಮುನಿವೆಂಕಟಪ್ಪ ಹಾಗೂ ಕೊಲೆಯಾಗಿರುವ ನಾರಾಯಣ ಸ್ವಾಮಿ ಕುಡಿದು ಬಾರ್ ಮುಂದೆ ಗಲಾಟೆ ಮಾಡಿಕೊಂಡಿದ್ದರು. ತಂದೆ ನಾರಾಯಣಸ್ವಾಮಿಗೆ ಹಲ್ಲೆ ಮಾಡಿದ್ದಾನೆ ಎನ್ನುವ ಕೋಪಕ್ಕೆ ಹೋಗಿ ಮುನಿವೆಂಕಟಪ್ಪ ಮಗ ಅಜಯ್, ನಾರಾಯಣಸ್ವಾಮಿಗೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾನೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ನಾರಾಯಣಸ್ವಾಮಿಯನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತ ಪಟ್ಟಿದ್ದಾರೆ.
ಈ ಘಟನಾ ಸಂಬಂದ ಕೊಲೆ ಪ್ರಕರಣ ದಾಖಲಸಿಕೊಂಡಿರುವ ಚಿಕ್ಕಜಾಲ ಪೊಲೀಸರು ಕೊಲೆಗಾರ ಅಜಯ್ನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಚನ್ನರಾಯಪಟ್ಟಣದಲ್ಲಿ ಸರಣಿ ಅಪಘಾತ | ಬಸ್ ಪಲ್ಟಿ, ಬೈಕ್ ಸವಾರ ಸಾವು ; ನಜ್ಜುಗುಜ್ಜಾದ ಕಾರು



















