ಈ ಸೆಲೆಬ್ರಿಟಿಗಳೇ ಹಾಗೆ ತಮ್ಮ ಸೌಂದರ್ಯ ಹಾಗೂ ಫಿಟ್ನೆಸ್ ಗಾಗಿ ಏನೇನೋ ಕಸರತ್ ಮಾಡುತ್ತಿರುತ್ತಾರೆ. ಕೆಲವು ಸೆಲೆಬ್ರಿಟಿಗಳು ತಮ್ಮ ಬ್ಯೂಟಿ ಬಗ್ಗೆ ಹೇಳಿದರೆ ಇನ್ನೂ ಕೆಲವರು ಅದನ್ನು ಸಸ್ಪೆನ್ಸ್ ಅಂತಾರೆ. ಇದೀಗ ಬಾಲಿವುಡ್ ನ ಖ್ಯಾತ ನಟಿ ಮಲೈಕಾ ಅರೋರ ತಮ್ಮ ಫಿಟ್ನೆಸ್ ಹಾಗೂ ಸೌಂದರ್ಯದ ಗುಟ್ಟು ರಟ್ಟು ಮಾಡಿದ್ದಾರೆ.
ಹೌದು ಮಲೈಕಾ 50 ದಾಟಿದ ನಂತರವೂ ಕೂಡ ತುಂಬಾ ಯಂಗ್ ಅಂಡ್ ಎನರ್ಜಿಟಿಕ್ ಆಗಿದ್ದಾರೆ. ಈ ಬ್ಯೂಟಿ ಸೀಕ್ರೇಟ್ ಏನು ಎಂಬುವುದನ್ನು ಈಗ ಎಲ್ಲರ ಮುಂದೆ ಹೇಳಿಕೊಂಡಿದ್ದಾರೆ. ನಾನು ಎದ್ದಾಗ ಕೇವಲ ಒಂದು ಚಮಚ ತುಪ್ಪ ತಿನ್ನುತ್ತೇನೆ.
ನಂತರ ಮಧ್ಯಾಹ್ನ 12 ಗಂಟೆಗೆ ಹೊಟ್ಟೆ ತುಂಬ ಊಟ ಮಾಡುತ್ತೇನೆ. ಅದರಲ್ಲಿ ಅನ್ನ, ಚಪಾತಿ, ತರಕಾರಿಗಳು ಸೇರಿವೆ. ಒಂದು ನಿರ್ದಿಷ್ಟ ವಯಸ್ಸಿನ ನಂತರ, ನಿಮಗೆ ಅನೇಕ ಆರೋಗ್ಯ ಸಮಸ್ಯೆಗಳು ಬರುತ್ತವೆ. ಅದಕ್ಕೆ ಅನುಗುಣವಾಗಿ, ನಿಮ್ಮ ಆಹಾರವನ್ನು ನಿಯಂತ್ರಿಸುವುದು ಅವಶ್ಯಕ’ ಎಂದು ಬ್ಯೂಟಿ ಸೀಕ್ರೇಟ್ ರಿವೀಲ್ ಮಾಡಿದ್ದಾರೆ.