ಬೆಂಗಳೂರು : ಭಾರತೀಯ ಆಟೋಮೊಬೈಲ್ ಉದ್ಯಮದಲ್ಲಿ ಮಹತ್ವದ ಬೆಳವಣಿಗೆಯಾಗಿ, ದೇಶದ ಪ್ರೀಮಿಯರ್ ಎಸ್‌ಯುವಿ ತಯಾರಕರಾದ ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್, ಸ್ಕಾರ್ಪಿಯೊ-ಎನ್ ಕಾರ್ಬನ್ ಎಡಿಷನ್ ಬಿಡುಗಡೆ ಮಾಡಿದೆ. ಆವೃತ್ತಿಯು ಸ್ಕಾರ್ಪಿಯೊ-ಎನ್ ಮಾದರಿಯ 2,00,000 ಯುನಿಟ್‌ಗಳನ್ನು ಮಾರಾಟ ಮಾಡಿದ ಸಂಭ್ರಮಕ್ಕಾಗಿ ಕಾರ್ಬನ್ ಎಡಿಷನ್ ಬಿಡುಗಡೆ ಮಾಡಲಾಗಿದೆ.
ಸ್ಕಾರ್ಪಿಯೊ-ಎನ್ ಕಾರ್ಬನ್ ಎಡಿಷನ್ ಹೊಂದಿರುವ ಪರಿಪೂರ್ಣ ವಿನ್ಯಾಸ ಮತ್ತು ವೈಶಿಷ್ಟ್ಯ, ಮಹೀಂದ್ರಾ ತನ್ನ ಎಸ್‌ಯುವಿ ಮಾರುಕಟ್ಟೆಯಲ್ಲಿ ಹೊಸ ಮಾನದಂಡಗಳನ್ನು ಸೃಷ್ಟಿಸಿರುವುದಕ್ಕೆ ಸಾಕ್ಷಿಯಾಗಿದೆ. “#BigDaddyOfSUVs” ಎಂದು ಕರೆಯಲ್ಪಡುವ ಸ್ಕಾರ್ಪಿಯೊ- ಎನ್ ತನ್ನ ಕಾರ್ಯಕ್ಷಮತೆಯಿಂದಾಗಿ ಆಟೋಮೊಬೈಲ್ ಪ್ರಿಯರನ್ನು ಸೆಳೆದಿದೆ.
ಕಾರ್ಬನ್ ಎಡಿಷನ್ ಇತರ ಆವೃತ್ತಿಗಳಿಗಿಂತ ವಿಭಿನ್ನವಾಗಿ, ವಿಶಿಷ್ಟ ಟೋನ್-ಆನ್-ಟೋನ್ ಇಂಟೀರಿಯನ್ ವಿನ್ಯಾಸ, ಪ್ರೀಮಿಯಂ ಲೆದರೆಟ್ ಸೀಟ್ಗಳು ಮತ್ತು ಗಮನಸೆಳೆಯುವ ಕಾನ್ಟ್ರಾಸ್ಟ್ ಡೆಕೊ-ಸ್ಟಿಚಿಂಗ್ ಅನ್ನು ಒಳಗೊಂಡಿದೆ. ಜೊತೆಗೆ, ಸ್ಮೋಕ್ಡ್ ಕ್ರೋಮ್ ಫಿನಿಷ್‌ಗಳು ಹೆಚ್ಚು ಆಕರ್ಷಕವಾಗಿದೆ.
ಸ್ಕಾರ್ಪಿಯೊ-ಎನ್ ಕಾರ್ಬನ್ ಎಡಿಷನ್ ಮೆಟಾಲಿಕ್ ಬ್ಲ್ಯಾಕ್ ಥೀಮ್ ಹೊಂದಿದೆ. ಸ್ಮೋಕ್ಡ್ ಕ್ರೋಮ್ ಡಿಸೈಮನ್ , ಬ್ಲ್ಯಾಕ್ ಅಲಾಯ್ ವೀಲ್ಗಳು ಮತ್ತು ಡಾರ್ಕ್ ಗಲ್ವಾನೊ ಫಿನಿಷ್‌ಗಳ ಕ್ಯಾರಿ ರೇಲ್ಸ್‌ಗಳಿವೆ. ಡಿಸೈನ್ ಮೂಲಕ ಸ್ಕಾರ್ಪಿಯೊ-ಎನ್ ಆಧಿಪತ್ಯ ಹೆಚ್ಚಿಸಿದೆ. ಏರೋಡೈನಾಮಿಕ್ ಹಾಗೂ ಹ್ಯಾಂಡ್ಲಿಂಗ್ ಕೂಡ ವಿಶೇಷವಾಗಿದೆ.
ಸ್ಕಾರ್ಪಿಯೊ-ಎನ್ ಕಾರ್ಬನ್ ಎಡಿಷನ್ ಲಕ್ಸರಿ ಭಾವ ಮೂಡಿಸುತ್ತದೆ. ಇದು ಎಕ್ಸ್‌ಕ್ಲೂಸಿವ್ Z8 ಮತ್ತು Z8L ಎಡಿಷನ್‌ಗಳಲ್ಲಿ ಲಭ್ಯವಿದೆ. 5-ಸ್ಟಾರ್ ಗ್ಲೋಬಲ್ NCAP ರೇಟಿಂಗ್ ಹೊಂದಿರುವ ಇದರ ನಿರಂತರ ಯಶಸ್ಸು, 2,00,000 ಯುನಿಟ್‌ಗಳ ಮಾರಾಟದ ಮೂಲಕ ಸಾಬೀತಾಗಿದೆ. ಸ್ಕಾರ್ಪಿಯೊ-ಎನ್ ಕಾರ್ಬನ್ ಎಡಿಷನ್ ಬಿಡುಗಡೆ ಮೂಲಕ ಮಹೀಂದ್ರಾ ಈ ಮಾರಾಟದ ಶಕ್ತಿಯನ್ನು ಹೆಚ್ಚಿಸಿದೆ. ಸುರಕ್ಷತೆ ಮತ್ತು ಶೈಲಿಯಲ್ಲಿ ಉತ್ತಮ ವಾಹನಗಳನ್ನು ಒದಗಿಸಲು ತನ್ನ ಬದ್ಧತೆಯನ್ನು ತೋರಿಸಿದೆ.