ಮಹೀಂದ್ರಾ ಬೊಲೆರೊ ನಿಯೋ, ಬ್ರ್ಯಾಂಡ್‌ನ ಅತಿ ಹೆಚ್ಚು ಮಾರಾಟವಾಗುವ ಎಸ್‌ಯುವಿಗಳಲ್ಲಿ ಒಂದಾಗಿದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಈಗ, ತನ್ನ ಮಾರಾಟದ ಅಂಕಿಅಂಶಗಳನ್ನು ಸ್ಥಿರವಾಗಿರಿಸಿಕೊಳ್ಳುವ ಸಲುವಾಗಿ, ಮಹೀಂದ್ರಾ ಆಟೋಮೋಟಿವ್, ಬೊಲೆರೊ ನಿಯೋ ಫೇಸ್‌ಲಿಫ್ಟ್ ಅನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿದೆ. ಇತ್ತೀಚೆಗೆ, ಬೊಲೆರೊ ನಿಯೋದ ಪರೀಕ್ಷಾರ್ಥ ಮಾದರಿಯೊಂದು ಸಾರ್ವಜನಿಕ ರಸ್ತೆಗಳಲ್ಲಿ ಪರೀಕ್ಷೆ ನಡೆಸುತ್ತಿರುವುದು ಕಂಡುಬಂದಿದೆ. ಈ ಬಾರಿ, ಬೊಲೆರೊ ನಿಯೋ ಪರಿಷ್ಕೃತ ಮುಂಭಾಗ ಮತ್ತು ಕೆಲವು ಇತರ ಕಾಸ್ಮೆಟಿಕ್ ಅಪ್‌ಡೇಟ್‌ಗಳನ್ನು ಪಡೆಯಲಿದೆ.

ಹೊಸ ಮುಂಭಾಗ ಮತ್ತು ವಿನ್ಯಾಸ
ಮಹೀಂದ್ರಾ ಬೊಲೆರೊ ನಿಯೋ ಫೇಸ್‌ಲಿಫ್ಟ್‌ನ ಪ್ರಮುಖ ಆಕರ್ಷಣೆ ಅದರ ಹೊಚ್ಚ ಹೊಸ ಮುಂಭಾಗದ ಗ್ರಿಲ್ ಆಗಿರಲಿದೆ. ಮಹೀಂದ್ರಾದ ಸಿಗ್ನೇಚರ್ ವರ್ಟಿಕಲ್ ಸ್ಲ್ಯಾಟ್‌ಗಳ ಬದಲು, ಈ ಎಸ್‌ಯುವಿ ಹೊಸ ಹಾರಿಜಾಂಟಲ್ ಸ್ಲ್ಯಾಟ್‌ಗಳನ್ನು ಪಡೆಯಲಿದೆ. ಜೊತೆಗೆ, ಹೊಸ ಲೋವರ್ ಗ್ರಿಲ್ ಮತ್ತು ಟ್ರೆಪೆಜೋಡೈಲ್ ಏರ್ ಡ್ಯಾಮ್ ಕೂಡ ಇರಲಿದೆ.
ಆಯತಾಕಾರದ ಸಿಂಗಲ್-ಬ್ಯಾರೆಲ್ ಹ್ಯಾಲೊಜೆನ್ ಹೆಡ್‌ಲೈಟ್‌ಗಳು ಹಾಗೆಯೇ ಉಳಿದುಕೊಂಡರೂ, ಎಸ್‌ಯುವಿಗೆ ಹೊಸ ನೋಟ ನೀಡಲು ಅವುಗಳ ಆಂತರಿಕ ವಿನ್ಯಾಸವನ್ನು ಬದಲಾಯಿಸಲಾಗುವುದು. ಮಧ್ಯದಲ್ಲಿ ‘ಟ್ವಿನ್ ಪೀಕ್ಸ್‘ ಲೋಗೋ ರಾರಾಜಿಸಲಿದೆ. ಸೈಡ್ ಪ್ರೊಫೈಲ್‌ನಲ್ಲಿ, ಅಪ್‌ಡೇಟ್ ಮಾಡಲಾದ 15-ಇಂಚಿನ ಅಲಾಯ್ ವೀಲ್‌ಗಳು ಪ್ರಮುಖ ಆಕರ್ಷಣೆಯಾಗಿರಲಿವೆ.
ಉಳಿದಂತೆ, ಸೈಡ್ ಸ್ಟೆಪ್ಸ್, ಟೈಲ್‌ಗೇಟ್-ಮೌಂಟೆಡ್ ಸ್ಪೇರ್ ವೀಲ್, ಸಾಂಪ್ರದಾಯಿಕ ಆಂಟೆನಾ, ಮತ್ತು ಹಿಂಬದಿಯ ಟೈಲ್‌ಲೈಟ್‌ಗಳು ಸೇರಿದಂತೆ ಒಟ್ಟಾರೆ ವಿನ್ಯಾಸವು ಹಿಂದಿನಂತೆಯೇ ಇರಲಿದೆ.

ಅಪ್‌ಡೇಟೆಡ್ ಇಂಟೀರಿಯರ್ ಸಾಧ್ಯತೆ
ಇದು ಇನ್ನೂ ಖಚಿತಪಟ್ಟಿಲ್ಲವಾದರೂ, ಮಹೀಂದ್ರಾ ಫೇಸ್‌ಲಿಫ್ಟೆಡ್ ಬೊಲೆರೊ ನಿಯೋದಲ್ಲಿ ದೊಡ್ಡದಾದ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ನೀಡುವ ಸಾಧ್ಯತೆಯಿದೆ. ಇದರೊಂದಿಗೆ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ ಕೆಲವು ಇತರ ಅಪ್‌ಡೇಟ್‌ಗಳೂ ಇರಬಹುದು.
ಎಂಜಿನ್ ಮತ್ತು ಪವರ್‌ಟ್ರೇನ್
ಮಹೀಂದ್ರಾ, ಪ್ರಸ್ತುತ ಬೊಲೆರೊ ನಿಯೋದಲ್ಲಿರುವ ಇಂಜಿನ್ ಅನ್ನೇ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಇದು ಬ್ರ್ಯಾಂಡ್‌ನ ಕಾಲಪರೀಕ್ಷಿತ 1.5-ಲೀಟರ್ ಮೂರು-ಸಿಲಿಂಡರ್ mHawk100 ಡೀಸೆಲ್ ಇಂಜಿನ್ ಆಗಿದ್ದು, 100 bhp ಮತ್ತು 260 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಕೇವಲ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಲಭ್ಯವಿರಲಿದೆ ಎಂದು ನಿರೀಕ್ಷಿಸಲಾಗಿದೆ.
ಮಾರಾಟ ಮತ್ತು ಗುರಿ ಗ್ರಾಹಕರು
ಇತ್ತೀಚಿನ ವರ್ಷಗಳಲ್ಲಿ ಮಹೀಂದ್ರಾ ತನ್ನ ಆಧುನಿಕ, ತಂತ್ರಜ್ಞಾನ-ಭರಿತ ಮತ್ತು 4X4 ಸಾಮರ್ಥ್ಯದ ಎಸ್‌ಯುವಿಗಳಿಂದ ಜನಪ್ರಿಯವಾಗಿದ್ದರೂ, ದೇಶದಾದ್ಯಂತ ಗ್ರಾಮೀಣ ಭಾಗದ ವಾಹನ ಖರೀದಿದಾರರ ನೆಚ್ಚಿನ ಆಯ್ಕೆಯಾಗಿಯೂ ಉಳಿದುಕೊಂಡಿದೆ. ಬೊಲೆರೊ, ವರ್ಷಗಳಿಂದ ಸ್ಥಿರವಾದ ಮಾರಾಟವನ್ನು ಕಾಯ್ದುಕೊಂಡಿದೆ. ಪ್ರಸ್ತುತ, ಮಹೀಂದ್ರಾ ಬೊಲೆರೊ ನಿಯೋ ಮತ್ತು ನಿಯೋ+ ಒಟ್ಟಾಗಿ ತಿಂಗಳಿಗೆ ಸರಾಸರಿ 8,000 ಯುನಿಟ್‌ಗಳ ಮಾರಾಟವನ್ನು ಹೊಂದಿವೆ.
ಮುಂದಿನ ತಲೆಮಾರಿನ ಬೊಲೆರೊ ಕೂಡ ಬರುತ್ತಿದೆ
ಬೊಲೆರೊ ನಿಯೋ ಫೇಸ್‌ಲಿಫ್ಟ್ ಜೊತೆಗೆ, ಕಂಪನಿಯು ಮುಂದಿನ ತಲೆಮಾರಿನ ಬೊಲೆರೊವನ್ನು ಅಭಿವೃದ್ಧಿಪಡಿಸುತ್ತಿದೆ. ಈ ಬಾರಿ, ಹೊಸ ಬೊಲೆರೊ, ಮಾಡ್ಯುಲರ್ ಮೊನೊಕಾಕ್ ಚಾಸಿಸ್ ಆಗಿರುವ ನ್ಯೂ ಫ್ಲೆಕ್ಸಿಬಲ್ ಆರ್ಕಿಟೆಕ್ಚರ್ (NFA) ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರಲಿದೆ. ಇದು ಬೊಲೆರೊವನ್ನು ಕಡಿಮೆ ರಗಡ್ ಆಗಿ ಮಾಡುವುದರಿಂದ, ಹೆಚ್ಚು ನಗರ ಪ್ರದೇಶದ ಖರೀದಿದಾರರನ್ನು ಆಕರ್ಷಿಸಲು ಸಹಾಯ ಮಾಡುತ್ತದೆ.
ಈ ಹೊಸ ಬೊಲೆರೊದ ಪರೀಕ್ಷಾರ್ಥ ಮಾದರಿಯು, ಥಾರ್ ROXX ನಂತಹ ವೃತ್ತಾಕಾರದ LED ಹೆಡ್‌ಲೈಟ್‌ಗಳು ಮತ್ತು DRLಗಳು, ಫ್ಲೇರ್ಡ್ ವೀಲ್ ಆರ್ಚ್‌ಗಳು, 18-ಇಂಚಿನ ಅಲಾಯ್ ವೀಲ್‌ಗಳು ಮತ್ತು ಒಟ್ಟಾರೆ ಬೋಲ್ಡ್ ಬಾಡಿ ಸ್ಟೈಲ್ ಅನ್ನು ಹೊಂದಿದೆ. ಇದು ADAS ಲೆವೆಲ್ 2, 360-ಡಿಗ್ರಿ ಕ್ಯಾಮೆರಾ, ಹೆಚ್ಚು ಪ್ರೀಮಿಯಂ ಇಂಟೀರಿಯರ್ ಮತ್ತು ಇತರ ಹಲವಾರು ಫೀಚರ್‌ಗಳನ್ನು ಸಹ ಹೊಂದಿರಲಿದೆ ಎಂದು ನಂಬಲಾಗಿದೆ.



















