ಈ ಪ್ರೇಮಿಗಳ ಹುಚ್ಚಾಟ ಒಂದೊಂದಲ್ಲಾ ಕುಂತಲ್ಲಿ, ನಿಂತಲ್ಲಿ ಬೇರೆಯವರು ತಮ್ಮನ್ನು ನೋಡುತ್ತಿರುತ್ತಾರೆ ಎಂಬ ಅರಿವಿಲ್ಲದೇ ಮೈಮರೆತು ಎಲ್ಲೆಂದರಲ್ಲಿ ರೊಮ್ಯಾನ್ಸ್ ಮಾಡುತ್ತಿರುತ್ತಾರೆ. ಇಂತಹ ಘಟನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ನಾವು ಗಮನಿಸಿರುತ್ತೇವೆ. ಇದೀಗ ಇಂಥದ್ದೇ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಪ್ರೇಮಿಗಳಿಬ್ಬರು ಬಸ್ಸಿನ ಹಿಂಬದಿ ಸೀಟಿನಲ್ಲಿ ಕುಳಿತು ಲೋಕದ ಪರಿಜ್ಞಾನವೇ ಇಲ್ಲದೇ ಅಪ್ಪಿಕೊಂಡು ಕಿಸ್ ಮಾಡಿರುವುದನ್ನು ಕಾಣಬಹುದು. ವಿಡಿಯೋ ನೋಡಿದ ನೆಟ್ಟಿಗರಂತೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಮೆಂಟ್ ಮಾಡುತ್ತಿದದಾರೆ. ಹಲವರು ಹಲವಾರು ರೀತಿ ಕಮೆಂಟ್ ಮಾಡುತ್ತಿದ್ದಾರೆ.