ಬೆಂಗಳೂರು ಗ್ರಾಮಾಂತರ: ಹೆದ್ದಾರಿಯಲ್ಲಿ ಟೊಮೆಟೋ ತುಂಬಿಕೊಂಡು ತೆರಳುತ್ತಿದ್ದ ಲಾರಿ ಪಲ್ಟಿಯಾಗಿರುವ ಘಟನೆ ನಡೆದಿದೆ.
ಮತ್ತೊಂದು ವಾಹನಕ್ಕೆ ಸೈಡ್ ಕೊಡಲು ಮುಂದಾಗಿದ್ದ ವೇಳೆ ಲಾರಿ ಪಲ್ಟಿಯಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಟೊಮೆಟೋ ಸಂಪೂರ್ಣ ನಾಶವಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹತ್ತಿರ ಈ ಘಟನೆ ನಡೆದಿದೆ.
ಟೊಮೆಟೋ ತುಂಬಿದ್ದ ಲಾರಿ ಕೋಲಾರದ ಮಾರುಕಟ್ಟೆಯಿಂದ ಖರೀದಿ ಮಾಡಿ ಗುಜರಾತ್ ಗೆ ತೆರಳುತ್ತಿತ್ತು. ಲಾರಿಯಲ್ಲಿ ಸುಮಾರು 15 ಲಕ್ಷ ರೂ. ಮೌಲ್ಯದ 24 ಟನ್ ಟೊಮೆಟೋ ಇತ್ತು ಎನ್ನಲಾಗಿದೆ. ಟೊಮೆಟೋ ಸಂಪೂರ್ಣ ನಾಶವಾಗಿವೆ ಎನ್ನಲಾಗಿದೆ. ಘಟನೆಯಲ್ಲಿ ಲಾರಿ ಚಾಲಕ ಹಾಗೂ ಕ್ಲೀನರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.