ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಳಗೂರು ಗ್ರಾಮದಲ್ಲಿ ಭೀಕರ ಅಪಘಾತ ನಡೆದಿದ್ದು, ರಸ್ತೆ ತಿರುವಿನಲ್ಲಿ ಲಾರಿಯೊಂದು ಸುಮಾರು 50 ಅಡಿ ಎತ್ತರದಿಂದ ಪಲ್ಟಿಯಾಗಿದೆ.
ಲಾರಿ ಚಾಲಕ ಲಾರಿಯೊಂದನ್ನ ರಸ್ತೆಯಲ್ಲಿ ಚಲಾಯಿಸುತ್ತಿದ್ದ ವೇಳೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಸುಮಾರು 50 ಅಡಿ ಎತ್ತರದಿಂದ ಲಾರಿ ಮಕಾಡೆ ಬಿದ್ದಿದೆ. ಬಿದ್ದ ರಭಸಕ್ಕೆ ಲಾರಿಯ ಕೆಲವು ಭಾಗಗಳು ಪುಡಿಪುಡಿ ಆಗಿವೆ. ಅಷ್ಟೇ ಅಲ್ಲ, ಮನೆಯ ಪಕ್ಕದಲ್ಲೇ ಬಂದು ಲಾರಿ ಬಿದ್ದಿದ್ದು, ಭಾರೀ ಅನಾಹುತವೊಂದು ತಪ್ಪಿದೆ.
ಒಂದು ವೇಳೆ ಮನೆ ಮೇಲೆ ಲಾರಿ ಬಿದ್ದಿದ್ದರೆ ದೊಡ್ಡ ಅನಾಹುತ ಆಗುವ ಸಾಧ್ಯತೆ ಇತ್ತು. ಇನ್ನು ಡ್ರೈವರ್ ಲಾರಿಯೊಳಗೆ ಲಾಕ್ ಆಗಿದ್ದ. ಸುಮಾರು ಎರಡು ಗಂಟೆಗಳ ಕಾಲ ಲಾರಿಯಲ್ಲೇ ಲಾಕ್ ಆಗಿದ್ದ. ನಂತರ ಸ್ಥಳೀಯರೆಲ್ಲ ಸೇರಿ ಆತನನ್ನು ರಕ್ಷಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ತೀವ್ರ ಗಾಯದಿಂದ ಬಳಲುತ್ತಿರುವ ಡ್ರೈವರ್ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ : ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಭೀಕರ ಅವಳಿ ಕೊಲೆ ಪ್ರಕರಣದ ಹಂತಕನಿಗೆ ಗಲ್ಲು ಶಿಕ್ಷೆ!



















