ಮಂಡ್ಯ : ಮಂಡ್ಯ ನಗರ ಯೋಜನಾ ಪ್ರಾಧಿಕಾರದ ಮೇಲೆ ಲೋಕಾಯುಕ್ತ ದಾಳಿ ನಡೆಸಿ ಮೂವರು ನೌಕರರನ್ನು ವಶಕ್ಕೆ ಪಡೆದಿದ್ದಾರೆ.
ಟೌನ್ ಪ್ಲ್ಯಾನಿಂಗ್ ಅನುಮೋದನೆಗಾಗಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ನಗರ ಯೋಜನಾ ಪ್ರಾಧಿಕಾರದ ಸಿಬ್ಬಂದಿಗಳಾದ ಅನನ್ಯ, ಸೌಮ್ಯ, ಹರೀಶ್ ಎಂಬವರನ್ನು ವಶಕ್ಕೆ ಪಡೆದಿದ್ದಾರೆ.
30 ಸಾವಿರಕ್ಕೆ ಬೇಡಿಕೆ ಇಟ್ಟು 15 ಸಾವಿರ ಮುಂಗಡ ಪಡೆಯುವ ವೇಳೆ ಮಂಡ್ಯ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು, ಇನ್ಸ್ಪೆಕ್ಟರ್ ಬ್ಯಾಟರಾಯ ಗೌಡ ಅವರಿಗೆ ರೆಂಡ್ ಹ್ಯಾಂಡ್ ಆಗಿ ಸಿಲುಕಿ ಹಾಕಿಕೊಂಡಿದ್ದಾರೆ.
ಮದ್ದೂರು ತಾಲೂಕಿನ ಚಂದೂಪುರದ ನಿವಾಸಿ ಪುನೀತ ಎಂಬುವವರು ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಲಂಚ ಪಡೆಯುತ್ತಿದ್ದ ವೇಳೆ ನೌಕರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.