ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದೆ.
ಬೆಂಗಳೂರು ನಗರದ-2, ಬೆಳಗಾವಿ-2, ಬಾಗಲಕೋಟೆ-1, ಚಿತ್ರದುರ್ಗ-1, ರಾಯಚೂರು-1 ಸೇರಿದಂತೆ ಒಟ್ಟು 7 ಜನ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಅಧಿಕಾರಿಗಳ ವಿರುದ್ಧ ಆದಾಯಕ್ಕೂ ಮೀರಿ ಅಸಮತೋಲನ ಆಸ್ತಿ ಹೊಂದಿದ್ದ ಆರೋಪ ಕೇಳಿ ಬಂದಿದೆ. 7 ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆಗಳು ಸೇರಿ 27 ಕಡೆ ಏಕಕಾಲದಲ್ಲಿ ದಾಳಿ ನಡೆಸಲಾಗಿತ್ತು.
7 ಜನ ಅಧಿಕಾರಿಗಳ ವಿರುದ್ಧದ ದಾಳಿಯ ವಿವರ ನೋಡುವುದಾದರೆ…
ಮಾಧವ್ ರಾವ್, ಬಿಬಿಎಂಪಿ ಹೆಬ್ಬಾಳ ಉಪ ವಿಭಾಗ, ಸಹಾಯಕ ಕಾರ್ಯಪಾಲಕ ಇಂಜಿನಿಯರ್
5 ಸ್ಥಳಗಳಲ್ಲಿ ಶೋಧ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು
ಸ್ಥಿರಾಸ್ತಿ ಅಂದಾಜು ಮೌಲ್ಯ 7 ನಿವೇಶನಗಳು, 2 ವಾಸದ ಮನೆಗಳು, 48.27 ಎಕರೆ ಕೃಷಿ ಜಮೀನು
ಒಟ್ಟು ಮೌಲ್ಯ 7 ಕೋಟಿ 52 ಲಕ್ಷ ರೂ. ಸ್ಥಿರಾಸ್ತಿ
97 ಸಾವಿರ 200 ನಗದು, 55 ಲಕ್ಷ ಮೌಲ್ಯದ ಚಿನ್ನಾಭರಣ
50 ಲಕ್ಷ ರೂ. ಬೆಲೆ ಬಾಳುವ ಐಶಾರಾಮಿ ವಾಹನಗಳು
ಒಟ್ಟಾರೆ ವರಾಸ್ಥಿ ಮೌಲ್ಯ 1 ಕೋಟಿ 5 ಲಕ್ಷ 97 ಸಾವಿರದ 200 ರೂ.
ಒಟ್ಟು ಆಸ್ತಿ ಮೌಲ್ಯ 8 ಕೋಟಿ 57 ಲಕ್ಷ 97 ಸಾವಿರದ 200 ರೂ.
ಕೆ.ಸಿ.ಶಶಿಧರ್, ಮ್ಯಾನೇಜರ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ
ಒಟ್ಟು 4 ಸ್ಥಳಗಳಲ್ಲಿ ಶೋಧ ಕಾರ್ಯ
ಒಟ್ಟು ಸ್ಥಿರಾಸ್ತಿ ಅಂದಾಜು ಮೌಲ್ಯ 1 ಕೋಟಿ 21 ಲಕ್ಷದ 20 ಸಾವಿರ ರೂ.
1 ನಿವೇಶನ, 1 ವಾಸದ ಮನೆ, 9.14 ಎಕರೆ ಕೃಷಿ ಜಮೀನು
ಒಟ್ಟು ಚರಾಸ್ತಿ ಮೌಲ್ಯ 57 ಲಕ್ಷದ 5 ಸಾವಿರ 839 ರೂಪಾಯಿ
58 ಸಾವಿರ ನಗದು ಹಣ, 21 ಲಕ್ಷದ 66 ಸಾವಿರದ 400 ರೂಪಾಯಿ ಮೌಲ್ಯದ ಚಿನ್ನಾಭರಣ
34 ಲಕ್ಷದ 81 ಸಾವಿರದ 439 ರೂಪಾಯಿ ಮೌಲ್ಯದ ಐಶಾರಾಮಿ ವಾಹನಗಳು
ಎಲ್ಲಾ ಆಸ್ತಿ ಒಟ್ಟು ಮೌಲ್ಯ 1 ಕೋಟಿ 78 ಲಕ್ಷ 25 ಸಾವಿರದ 839 ರೂಪಾಯಿಗಳು
ಸಂಜಯ್ ಅಣ್ಣಪ್ಪ ದುರ್ಗಣ್ಣವರ್, ಹೆಲ್ತ್ ಇನ್ಸ್ ಪೆಕ್ಟರ್, ರಾಯಬಾಗ್ ತಾಲ್ಲೂಕು, ಬೆಳಗಾವಿ ಜಿಲ್ಲೆ
3 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ಶೋಧ ಕಾರ್ಯ
ಒಟ್ಟು ಸ್ಥಿರಾಸ್ತಿ ಮೌಲ್ಯ 50 ಲಕ್ಷ 77 ಸಾವಿರ
4 ನಿವೇಶನ, 1 ವಾಸದ ಮನೆ, 1 ಎಕರೆ ಕೃಷಿ ಜಮೀನು
ಚರಾಸ್ತಿ ಮೌಲ್ಯ 23 ಲಕ್ಷದ 30 ಸಾವಿರದ 514 ರೂಪಾಯಿ
2 ಸಾವಿರ 190 ರೂಪಾಯಿ ನಗದು ಹಣ, 9 ಲಕ್ಷ 92 ಸಾವಿರದ 324 ಬೆಲಬಾಳುವ ಚಿನ್ನಾಭರಣ
4 ಲಕ್ಷ 50 ಸಾವಿರ ಮೌಲ್ಯದ ವಾಹನಗಳು
8 ಲಕ್ಷ 86 ಸಾವಿರ ಇತರೆ ಮತ್ತು ಗೃಹೋಪಯೋಗಿ ವಸ್ತುಗಳು
ಒಟ್ಟು ಆಸ್ತಿ ಮೌಲ್ಯ – 74 ಲಕ್ಷದ 7 ಸಾವಿರದ 514
ಸಚಿನ್ ಬಸವಂತ್ ಮಂಡೆಡ್ @ ಮಂಡೆದಾರ್, ಸಬ್ ರಿಜಿಸ್ಟಾರ್, ಬೆಳಗಾವಿ ಉತ್ತರ, ಬೆಳಗಾವಿ
ಒಟ್ಟು 5 ಸ್ಥಳಗಳಲ್ಲಿ ಶೋಧ ಕಾರ್ಯ
ಒಟ್ಟು ಸ್ಥಿರಾಸ್ತಿ ಅಂದಾಜು ಮೌಲ್ಯ 58 ಲಕ್ಷ
1 ನಿವೇಶನ, 1 ನಿರ್ಮಾಣ ಹಂತದ ವಾಸದ ಮನೆ, 1.12 ಎಕರೆ ಕೃಷಿ ಜಮೀನು
ಸ್ಥಿರಾಸ್ತಿ ಒಟ್ಟು ಮೌಲ್ಯ 58 ಲಕ್ಷ
ಚರಾಸ್ತಿ ಮೌಲ್ಯ 1 ಕೋಟಿ 92 ಲಕ್ಷ 12 ಸಾವಿರದ 559 ರೂಪಾಯಿ
1 ಲಕ್ಷ 35 ಸಾವಿರ ನಗದು, 87 ಲಕ್ಷದ 27 ಸಾವಿರದ 559 ಬೆಲೆಬಾಳುವ ಚಿನ್ನಾಭರಣ
2 ಲಕ್ಷ 50 ಸಾವಿರ ಮೌಲ್ಯದ ಐಶಾರಾಮಿ
1 ಕೋಟಿ 1 ಲಕ್ಷ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಹಣ, ಮ್ಯೂಚುಯಲ್ ಫಂಡ್ ಮತ್ತು ಈಕ್ವಿಟಿ ಶೇರ್ಸ್ ಎಲ್ಲಾ ಸೇರಿ ಒಟ್ಟು ಮೌಲ್ಯ 1 ಕೋಟಿ 92 ಲಕ್ಷದ 12 ಸಾವಿರದ 559 ರೂಪಾಯಿ
ಒಟ್ಟು ಆಸ್ತಿ ಮೌಲ್ಯ 2 ಕೋಟಿ 50 ಲಕ್ಷ 12 ಸಾವಿರದ 559 ರೂಪಾಯಿ
ಶಿವಲಿಂಗಯ್ಯ ಪಂಚಾಕ್ಷರಯ್ಯ ಹಿರೇಮಠ, ಪಿಡಿಓ, ಹುಲಗೇರಿ ಗ್ರಾ.ಪಂ. ಬಾದಾಮಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ
ಒಟ್ಟು 3 ಸ್ಥಳಗಳಲ್ಲಿ ಕಾರ್ಯಚರಣೆ
ಸ್ಥಿರಾಸ್ತಿ ಅಂದಾಜು ಮೌಲ್ಯ 1 ಕೋಟಿ 18 ಲಕ್ಷದ 70 ಸಾವಿರ
1 ನಿವೇಶನ, 1 ವಾಸದ ಮನೆ,
ಚರಾಸ್ತಿ ಮೌಲ್ಯ 24 ಲಕ್ಣದ 75 ಸಾವಿರದ 630 ರೂಪಾಯಿ
1 ಲಕ್ಷ 97 ಸಾವಿರದ 130 ನಗದು, 14 ಲಕ್ಷ 28 ಸಾವಿರದ 500 ಮೌಲ್ಯದ ಚಿನ್ನಾಭರಣ
8 ಲಕ್ಷ 50 ಸಾವಿರ ಮೌಲ್ಯದ ವಾಹನಗಳು
ಎಲ್ಲಾ ಆಸ್ತಿ ಒಟ್ಟು 1 ಕೋಟಿ 43 ಲಕ್ಷದ 45 ಸಾವಿರದ 630 ರೂಪಾಯಿಗಳು
ನರಸಿಂಗ ರಾವ್ ಗುಜ್ಜಾರ್, ಅಸಿಸ್ಟಂಟ್ ಅಕೌಂಟೆಂಟ್, ಜಿಲ್ಲಾ ಪಂಚಾಯತ್ ಕಚೇರಿ, ರಾಯಚೂರು ಜಿಲ್ಲೆ
2 ಸ್ಥಳಗಳಲ್ಲಿ ಲೋಕಾಯುಕ್ತ ಶೋಧ ಕಾರ್ಯ
ಒಟ್ಟು ಸ್ಥಿರಾಸ್ತಿ ಅಂದಾಜು ಮೌಲ್ಯ 78 ಲಕ್ಷ
5 ನಿವೇಶನಗಳು, 2 ವಾಸದ ಮನೆಗಳು
ಚರಾಸ್ತಿ ಮೌಲ್ಯ 42 ಲಕ್ಷ 48 ಸಾವಿರದ 182 ರೂಪಾಯಿಗಳು
38 ಸಾವಿರದ 182 ರೂಪಾಯಿ ನಗದು ಹಣ, 40 ಲಕ್ಷ 40 ಸಾವಿರ ಮೌಲ್ಯದ ಚಿನ್ನಾಭರಣಗಳು
1 ಲಕ್ಷ 70 ಸಾವಿರ ಮೌಲ್ಯದ ವಾಹನಗಳು
ಒಟ್ಟು ಆಸ್ತಿ ಮೌಲ್ಯ 1 ಕೋಟಿ 20 ಲಕ್ಷ 48 ಸಾವಿರದ 182 ರೂಪಾಯಿಗಳು