ಪಹಲ್ಗಾಮ್ ಹತ್ಯಾಕಾಂಡಕ್ಕೆ ಸ್ಥಳೀಯರಿಂದಲೂ ಸಹಕಾರ ಸಿಕ್ಕಿರಬಹುದು ಎಂಬ ಪ್ರಶ್ನೆ ಕಾಡುತ್ತಿದೆ.
ಇದಕ್ಕೆ ಸಾಕ್ಷಿ ಎನ್ನುವಂತೆ ಜಿಪ್ ಲೈನ್ ಆಪರೇಟರ್ ಓರ್ವ ಅಲ್ಲಾಹು ಅಕ್ಬರ್ ಅಂತಾ ಕೂಗಿದ್ದೀಗ ಹೊಸ ತಿರುವು ಪಡೆಯುವಂತೆ ಮಾಡಿದೆ. ರಿಷಿ ಭಟ್ ಎನ್ನುವ ಪ್ರವಾಸಿಗನೋರ್ವ ಮಾಡಿದ್ದ ಸೆಲ್ಫಿ ದೇಶದೆಲ್ಲೆಡೆ ಸಂಚಲನ ಮೂಡಿಸಿದ್ದು, ಎನ್ ಐಎ ಕೂಡ ಇದೀಗ ತನಿಖೆ ಚುರುಕುಗೊಳಸಿದೆ.
ರಿಷಿ ಭಟ್ ಜಿಪ್ ಲೈನ್ ನಲ್ಲಿ ಹೋಗುವ ಸಂದರ್ಭದಲ್ಲೇ ಅಲ್ಲಿದ್ದ ಆಪರೇಟರ್ ಅಲ್ಲಾಹು ಅಕ್ಬರ್ ಅಂತಾ ಮೂರು ಬಾರಿ ಕೂಗಿದ್ದಾನೆ. ಇದಾಗುತ್ತಿದ್ದಂತೆ ಅಲ್ಲಿ ಗುಂಡಿನ ಮೊರೆತ ಆರಂಭವಾಗಿತ್ತು. ಇದಕ್ಕೂ ಮುನ್ನ ರಿಷಿ ಪತ್ನಿ ಹಾಗೂ ಪುತ್ರನೂ ಜಿಪ್ ಲೈನ್ ನಲ್ಲಿ ಸಾಗಿದ್ದರು. ಆದರೆ, ಆ ಆಪರೇಟರ್ ಈ ರೀತಿ ಕೂಗಿರಲಿಲ್ಲ ಎನ್ನುವುದನ್ನು ರಿಷಿ ಸ್ಪಷ್ಟಪಡಿಸಿದ್ದಾರೆ. ಈ ನಡುವೆ, ಜಿಪ್ ಲೈನ್ ಆಪರೇಟರ್ ನನ್ನು ಒಂದು ಸುತ್ತು ವಿಚಾರಣೆ ಮಾಡಿದ್ದ ಎನ್ ಐಎ ಇಂದು ಮತ್ತೆ ವಿಚಾರಣೆಗೆ ಬುಲಾವ್ ನೀಡಿದೆ.