ಓಣಂ ಹಬ್ಬದ ಹಿನ್ನೆಲೆಯಲ್ಲಿ ಕೇರಳ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ. ಕೇರಳ ರಾಜ್ಯ ಪಾನೀಯ ನಿಗಮ (KSBC) ಮದ್ಯ(Liquor) ಮಾರಾಟದ ವಿಷಯದಲ್ಲಿ ಇಂತಹದೊಂದು ದಾಖಲೆಯಾಗಿದೆ ಎಂದು ಹೇಳಿದೆ.
ಕೇರಳದಲ್ಲಿ ಕೇವಲ 10 ದಿನಗಳಲ್ಲಿ ಬರೋಬ್ಬರಿ 826.38 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ಕೆಎಸ್ ಬಿಸಿ ಹೇಳಿದೆ.
ಹಿಂದಿನ ವರ್ಷ ಕೂಡ ದಾಖಲೆಯ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿತ್ತು. ಆದರೆ, ಆ ವೇಳೆಗಿಂತ ಈಗ 50 ಕೋಟಿ ರೂ. ಗೂ ಹೆಚ್ಚು ಮದ್ಯ ಮಾರಾಟವಾಗಿದೆ.
ಆಗಸ್ಟ್ 25 ರಿಂದ ಸೆಪ್ಟೆಂಬರ್ 4 ರವರೆಗೆ ಒಟ್ಟು 826.38 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. ಇದು ಕಳೆದ ವರ್ಷಕ್ಕಿಂತ ಶೇ. 6.38 ರಷ್ಟು ಹೆಚ್ಚಾಗಿದೆ. 2024 ರ ಇದೇ ಅವಧಿಯಲ್ಲಿ 776.82 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿತ್ತು ಎಂದು ತಿಳಿದು ಬಂದಿದೆ.
ಓಣಂ ದಿನದಂದು ಗುರುವಾರ 137.64 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದ್ದರೆ, ಕಳೆದ ವರ್ಷ ಅದೇ ದಿನ ಮಾರಾಟ 126.01 ಕೋಟಿ ರೂ. ಆಗಿತ್ತು.