ಐಪಿಎಲ್ ನ ಪ್ರತಿ ಸೀಸನ್ ಆರಂಭಕ್ಕೂ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಿರಿಯ ಆಟಗಾರ ಹಾಗೂ ಭಾರತೀಯ ಕ್ರಿಕೆಟ್ ತಂಡದ ಮಾಜಿ ಯಶಸ್ವಿ ನಾಯಕ ಎಂ.ಎಸ್. ಧೋನಿ ಬಗ್ಗೆ ಒಂದು ಮಾತು ಕೇಳಿ ಬರುತ್ತಲೇ ಇರುತ್ತದೆ. ಧೋನಿ ಐಪಿಎಲ್ ನಿಂದ ನಿವೃತ್ತಿಯಾಗುವುದು ಯಾವಾಗ? ಎಂಬ ಮಾತು ಅದು. ಅದರೆ ವಯಸ್ಸಾದಂತೆ ಧೋನಿ ಇನ್ನೂ ಚುರುಕುತನ ತೋರಿಸುತ್ತಿರುವುದು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗುತ್ತಿದೆ.
ಮೈದಾನದಲ್ಲಿ ಧೋನಿ ಆಟ ಕಂಡು ಇನ್ನೂ ವಯಸ್ಸಾಗಿಲ್ಲ. ಅವರ ಆಟ ಇನ್ನೂ ಮಂಕಾಗಿಲ್ಲ ಎಂದೇ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಮಿಂಚಿನ ವೇಗದಲ್ಲಿ ಸ್ಟಂಪ್ ಮಾಡಿರುವ ಧೋನಿ, ಎದುರಾಳಿ ತಂಡದ ನಾಯಕ ಸೂರ್ಯಕುಮಾರ್ ಯಾದವ್ ರನ್ನು ಔಟ್ ಮಾಡಿರುವ ಪರಿ ಈಗ ಎಲ್ಲರ ಮೆಚ್ಚುಗೆಗೆ ಕಾರಣವಾಗುತ್ತಿದೆ.
ನೂರ್ ಅಹ್ಮದ್ ಬೌಲಿಂಗ್ ನಲ್ಲಿ ಮುಂದೆ ಬಂದು ಬಿಗ್ ಶಾಟ್ ಹೊಡೆಯಲು ಯತ್ನಿಸಿದ ಸೂರ್ಯಕುಮಾರ್ ನನ್ನು ಮಹೇಂದ್ರ ಸಿಂಗ್ ಧೋನಿ ಸ್ಟಂಪ್ ಔಟ್ ಮಾಡಿದರು. ಇದನ್ನು ಕಂಡು ಅಭಿಮಾನಿಗಳು ಹುಚ್ಚೆದ್ದು ಕುಣಿದರು. ಈ ಸ್ಟಂಪಿಂಗ್ ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.