ಭಾರತ ಸೂಪರ್ ಪವರ್ ದೇಶವಾಗಲಿ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.
ರಷ್ಯಾದ ಸೋಚಿ ನಗರದಲ್ಲಿ ನಡೆದ ಚರ್ಚಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಭಾರತ ನೂರೈವತ್ತು ಕೋಟಿ ಜನಸಂಖ್ಯೆ ಹೊಂದಿದೆ. ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ದೇಶವಾಗಿದೆ. ಅದು ಹೆಚ್ಚು ಬೆಳವಣಿಗೆ ಕಾಣುವ ಒಳ್ಳೆಯ ಲಕ್ಷಣಗಳನ್ನು ಹೊಂದಿದೆ. ಆ ದೇಶಕ್ಕೆ ಪ್ರಾಚೀನ ಸಂಸ್ಕೃತಿ ಇದೆ. ಹೀಗಾಗಿ, ಸೂಪರ್ಪವರ್ಗಳ ಪಟ್ಟಿಗೆ ನಿಸ್ಸಂದೇಹವಾಗಿ ಅದು ಸೇರ್ಪಡೆಯಾಗಬೇಕು ಎಂದು ಸಂತಸದಿಂದ ಹೇಳಿದ್ದಾರೆ.
ಭಾರತ ಮತ್ತು ರಷ್ಯಾ ಸಂಬಂಧಕ್ಕೆ ರಕ್ಷಣಾ ಮತ್ತು ಭದ್ರತಾ ಸಹಕಾರವು ಪ್ರಮುಖ ತಳಹದಿ ಒದಗಿಸಿದೆ. ರಷ್ಯಾದ ಹಲವು ರೀತಿಯ ಮಿಲಿಟರಿ ಉಪಕರಣಗಳು ಭಾರತೀಯ ಸೇನೆಯಲ್ಲಿ ಬಳಕೆ ಆಗುತ್ತಿವೆ. ಈ ಸಂಬಂಧದಲ್ಲಿ ವಿಶ್ವಾಸ ಇದೆ ಎಂದಿದ್ದಾರೆ.
ಭಾರತ ಮತ್ತು ಚೀನಾ ಮಧ್ಯೆ ಇರುವ ಬಿಗುವಿನ ವಾತಾರಣ ಶಮನವಾಗಬಹುದು. ‘ಬುದ್ಧಿವಂತ ವ್ಯಕ್ತಿಗಳು ತಮ್ಮ ದೇಶಗಳ ಭವಿಷ್ಯಕ್ಕೆ ಆದ್ಯತೆ ಇಟ್ಟುಕೊಂಡು ಹೊಂದಾಣಿಕೆಗೆ ಪ್ರಯತ್ನಿಸುತ್ತಾರೆ ಎಂದು ಹೇಳಿದ್ದಾರೆ.