ಚಿಕ್ಕಮಗಳೂರು: ಚಿರತೆ ದಾಳಿಯಿಂದ 5 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ನವಿಲೇಕಲ್ ಗುಡ್ಡದಲ್ಲಿ ನಡೆದಿದೆ.
ಸಾನ್ವಿ (5) ಚಿರತೆ ದಾಳಿಯಿಂದ ಸಾವನ್ನಪ್ಪಿದ ಬಾಲಕಿ. ಮನೆಯ ಹಿಂದೆ ಕೊಟ್ಟಿಗೆಯಲ್ಲಿ ಚಿರತೆ ಮಗುವಿನ ಮೇಲೆ ದಾಳಿ ಮಾಡಿದೆ. ಈ ವೇಳೆ ಮಗುವಿನ ಚೀರಾಟ ಕೇಳಿ ಪೋಷಕರು ಬಂದಿದ್ದಾರೆ. ಆದರೆ, ಅವರ ಎದರುರಲ್ಲೇ ಚಿರತೆ ಮಗುವನ್ನು ಕಾಡಿಗೆ ಹೊತ್ತೊಯ್ದಿದೆ.
ಬಳಿಕ ಸ್ಥಳಿಯರು ಹುಡುಕಾಡಿದಾಗ ಕಾಡಂಚಿನಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದ್ದು, ಸದ್ಯ ಈ ಸಂಬಂಧ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆ ಅನೇಕ ಬಾರಿ ಚಿರತೆ ದಾಳಿ ನಡೆದಿದ್ದು, ಚಿರತೆ ಸೆರೆ ಹಿಡಿಯುವಂತೆ ಸಸ್ಥಳೀಯರು ಮನವಿ ಮಾಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ 7.11 ಕೋಟಿ ರಾಬರಿ ಕೇಸ್ಗೆ ಮೆಗಾ ಟಿಸ್ಟ್ | ದರೋಡೆ ಮಾಸ್ಟರ್ ಮೈಂಡ್ ಪೊಲೀಸ್ ಕಾನ್ಸ್ಟೇಬಲ್ ಬಂಧನ..!



















